Webdunia - Bharat's app for daily news and videos

Install App

ಡ್ರೋಣ್ ಹಾರಾಟ ಮತ್ತಷ್ಟು ಸರಳ; ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ

Webdunia
ಶುಕ್ರವಾರ, 27 ಆಗಸ್ಟ್ 2021 (10:30 IST)
ನವದೆಹಲಿ (ಆ. 27):  ದೇಶದಲ್ಲಿ ಮನಸೋ ಇಚ್ಛೆ ಡ್ರೋಣ್ ಹಾರಾಟಕ್ಕೆ ನಿಯಂತ್ರಣ ಹೇರುವ ಉದ್ದೇಶದಿಂದ ನಾಗರಿಕ ವಿಮಾನಯಾನ ಸಚಿವಾಲಯ  ಡ್ರೋಣ್ ಕಾರ್ಯಾಚರಣೆ ಸಂಬಂಧ ಹೊಸ ನಿಯಮಗಳನ್ನು ಹೊರಡಿಸಿದೆ. ಈ ಹೊಸ ಡ್ರೋನ್ ನಿಯಮಗಳು ದೇಶದ ಈ ಕ್ಷೇತ್ರದ ಮಹತ್ವದ ಕ್ಷಣಕ್ಕೆ ನಾಂದಿ ಹಾಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ನಲ್ಲಿ ತಿಳಿಸಿದ್ದಾರೆ.

ಇನ್ನು ಹೊಸ ಡ್ರೋಣ್ ನಿಯಮಗಳು ಅನುಸಾರ ಯಾವುದೇ ನೋಂದಣಿ ಅಥವಾ ಪರವಾನಗಿ ನೀಡುವ ಮೊದಲು ಇದಕ್ಕೆ ಇದ್ದ ಭದ್ರತಾ ಅನುಮತಿಯನ್ನು ರದ್ದು ಮಾಡಲಾಗಿದೆ. ಗೆಜೆಟ್ ಅಧಿಸೂಚನೆಯ ಮೂಲಕ ‘ನೂತನ ಡ್ರೋನ್ ನಿಯಮಗಳು 2021 ಜಾರಿಗೊಳಿಸುತ್ತಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಇನ್ನು ಹೊಸ ನಿಯಮಗಳ ಅನುಸಾರ ಡ್ರೋಣ ಹಾರಾಟಕ್ಕೆ ಅನುಮೋದನೆಗಳು, ಅನುಸರಣೆ ಅಗತ್ಯತೆಗಳು ಮತ್ತು ಪ್ರವೇಶ ತಡೆಗೆ ಇದ್ದ ನಿಯಮಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ. ಈ ಹೊಸ ನಿಯಮಗಳನ್ನು ಈ ಹಿಂದೆ ಇದ್ದ ಮಾನವರಹಿತ ವಿಮಾನ ವ್ಯವಸ್ಥೆ (ಯುಎಎಸ್) ನಿಯಮಗಳು, 2021 ಅನ್ನು ರದ್ದುಗೊಳಿಸಿ ಜಾರಿ ತರಲಾಗಿದೆ.
ಈ ಹೊಸ ನಿಯಮಗಳಿಂದಾಗಿ ಈ ವಲಯದಲ್ಲಿ ಕೆಲಸ ಮಾಡುವ ಸ್ಟಾರ್ಟ್ ಅಪ್ಗಳು ಮತ್ತು ಯುವಕರಿಗೆ ಹೊಸ ನಿಯಮಗಳು ಮಹತ್ತರವಾಗಿ ಸಹಾಯ ಆಗಲಿದೆ. ಇದು ನಾವೀನ್ಯತೆ ಮತ್ತು ವ್ಯಾಪಾರಕ್ಕಾಗಿ ಹೊಸ ಸಾಧ್ಯತೆಗಳನ್ನು ತೆರೆಯುತ್ತದೆ. ಆವಿಷ್ಕಾರ, ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ನಲ್ಲಿ ಭಾರತದ ಸಾಮರ್ಥ್ಯಗಳನ್ನು ಹತೋಟಿಗೆ ತರಲು ಇದು ಸಹಾಯಕವಾಗಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ
ಹೊಸ ನಿಯಮಗಳ ಪ್ರಕಾರ ಶುಲ್ಕವನ್ನು ನಾಮಿನಲ್ ಮಟ್ಟಕ್ಕೆ ಚಲಾಯಿಸಲು ಶುಲ್ಕವನ್ನು ಕಡಿಮೆ ಮಾಡಿದೆ. ಡ್ರೋನ್ನ ಗಾತ್ರದಿಂದ ಡಿ-ಲಿಂಕ್ ಮಾಡಲಾಗಿದೆ. ಎಷ್ಟರ ಮಟ್ಟಿಗೆ ಕಡಿಮೆ ಮಾಡಲಾಗಿದೆ ಎಂದರೆ ಉದಾಹರಣೆ ದೊಡ್ಡ ಡ್ರೋನ್ಗೆ ರಿಮೋಟ್ ಪೈಲಟ್ ಪರವಾನಗಿಯ ಶುಲ್ಕವನ್ನು 3000 ರೂ ದಿಂದ 100 ಕ್ಕೆ ಇಳಿಸಲಾಗಿದೆ. ಅಷ್ಟೇ ಅಲ್ಲದೇ ಎಲ್ಲಾ ವರ್ಗದ ಡ್ರೋನ್ಗಳಿಗೆ ಇದು 10 ವರ್ಷಗಳವರೆಗೆ ಮಾನ್ಯವಾಗಿರುತ್ತದೆ.
ನಿಯಮಗಳ ಅನುಸರಣೆಯ ಪ್ರಮಾಣ ಪತ್ರ, ನಿರ್ವಹಣೆ ಪ್ರಮಾಣ ಪತ್ರ, ಆಮದು ಕ್ಲಿಯರೆನ್ಸ್, ಅಸ್ತಿತ್ವದಲ್ಲಿರುವ ಡ್ರೋನ್ಗಳ ಸ್ವೀಕಾರ, ಆಪರೇಟರ್ ಪರವಾನಗಿ, ಆರ್ ಅಂಡ್ ಡಿ ಸಂಸ್ಥೆಯ ಅಧಿಕಾರ ಮತ್ತು ವಿದ್ಯಾರ್ಥಿ ರಿಮೋಟ್ ಪೈಲಟ್ ಪರವಾನಗಿ ಸೇರಿದಂತೆ ವಿವಿಧ ಅನುಮೋದನೆಗಳ ಅಗತ್ಯವನ್ನು ಸಹ ರದ್ದುಗೊಳಿಸಲಾಗಿದೆ.
2021 ರ ಪ್ರಕಾರ, ವಿಶೇಷ ದೃಢೀಕರಣ ಸಂಖ್ಯೆ, ವಿಶೇಷ ಮೂಲಮಾದರಿಯ ಗುರುತಿನ ಸಂಖ್ಯೆ, ಉತ್ಪಾದನೆ ಮತ್ತು ವಾಯು ಯೋಗ್ಯತೆಯ ಪ್ರಮಾಣಪತ್ರವನ್ನು ರದ್ದುಗೊಳಿಸಲಾಗಿದೆ. 400 ಅಡಿಗಳವರೆಗಿನ ಗ್ರೀನ್ ಜೋನ್ನಲ್ಲಿ ಹಾರಾಟಕ್ಕೆ ಯಾವುದೇ ಅನುಮತಿ ಬೇಡ. ಜೊತೆಗೆ 8 ರಿಂದ 12 ಕಿಮೀ ನಡುವಿನ ಪ್ರದೇಶದಲ್ಲಿ 200 ಅಡಿಗಳವರೆಗಿನ ಹಾರಾಟಕ್ಕೂ ಅನುಮತಿ ಇಲ್ಲ ಎಂದು ಹೊಸ ನಿಯಮ ತಿಳಿಸಿದೆ.
ಹೊಸ ನಿಯಮದ ಅನುಸಾರ ಡ್ರೋನ್ಗಳ ವರ್ಗಾವಣೆ, ನೋಂದಣಿ ರದ್ದುಗೊಳಿಸುವಿಕೆಗೆ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭವಾಗಿಸಿದೆ. ವಾಣಿಜ್ಯೇತರ ಮೈಕ್ರೋ ಡ್ರೋನ್ ಬಳಕೆ ಮತ್ತು ನ್ಯಾನೋ ಡ್ರೋನ್ಗಳಿಗೆ ಯಾವುದೇ ಪೈಲಟ್ ಪರವಾನಗಿ ಅಗತ್ಯವಿಲ್ಲ. ಜೊತೆಗೆ ನಿಯಮ ಉಲ್ಲಂಘನೆ ಗರಿಷ್ಠ ದಂಡವನ್ನು 1 ಲಕ್ಷಕ್ಕೆ ಇಳಿಸಲಾಗಿದೆ.
ಹೊಸ ನಿಯಮಗಳ ಪ್ರಕಾರ, ಭಾರತದಲ್ಲಿ ಡ್ರೋನ್ ಕಾರ್ಯನಿರ್ವಹಿಸಬೇಕಾದರೆ ಮಾತ್ರ ಟೈಪ್ ಸರ್ಟಿಫಿಕೇಟ್ ಹಾಗೂ ವಿಶೇಷ ಗುರುತಿನ ಸಂಖ್ಯೆಯ ಅಗತ್ಯವಿದೆ. ಭಾರತದಲ್ಲಿ ನೋಂದಾಯಿಸಲಾದ ವಿದೇಶಿ ಒಡೆತನದ ಕಂಪನಿಗಳ ಡ್ರೋನ್ ಕಾರ್ಯಾಚರಣೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಹೊಸ ನಿಯಮ ತಿಳಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಅಡಿಕೆ ಬೆಲೆ ಇಂದೂ ಯಥಾಸ್ಥಿತಿಯಲ್ಲಿ, ಇಂದಿನ ಬೆಲೆ ವಿವರ ಇಲ್ಲಿದೆ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Rahul Gandhi: ರಾಹುಲ್ ಗಾಂಧಿ ಯಾವತ್ತಿದ್ರೂ ಪಾಕಿಸ್ತಾನ ಪರವಾಗಿಯೇ ಇರ್ತಾರೆ: ಬಿಜೆಪಿ ತಿರುಗೇಟು

Bengaluru Rains: ತೆಪ್ಪದಲ್ಲಿ ಕೂತು ಡಿಕೆ ಶಿವಕುಮಾರ್ ಬೆಂಗಳೂರು ರೌಂಡ್ಸ್: ನೆಟ್ಟಿಗರು ಹೇಳಿದ್ದೇನು

India Pakistan: ಜವಹರಲಾಲ್ ನೆಹರೂ ಪಾಕಿಸ್ತಾನಕ್ಕೆ ನೀರು ಮಾತ್ರವಲ್ಲ ಹಣವನ್ನೂ ಕೊಟ್ಟಿದ್ದರು

ಮುಂದಿನ ಸುದ್ದಿ
Show comments