Select Your Language

Notifications

webdunia
webdunia
webdunia
webdunia

ಮೇಕಪ್ ಇಲ್ಲದ ಹೆಂಡತಿ ನೋಡಿ ಡೈವೋರ್ಸ್‍ನೀಡಿದ ಗಂಡ!

ಮೇಕಪ್
ಈಗಿನ ಕಾಲದ ಹೆಣ್ಣುಮಕ್ಕಳು ಆಚೆ ಬರಬೇಕು ಅಂದರೆ ಮೇಕಪ್ ಇರಲೇ ಬೇಕು. ಹೊಟ್ಟೆಗೆ ಹಿಟ್ಟಿಲ್ಲ ಅಂದರೂ ಮುಖಕ್ಕೆ ಮೇಕಪ್ ಇರಲೇ ಬೇಕು ಅಂತಾರೆ ಈ ಫಾಸ್ಟ್ ಫುಡ್ ಜಮಾನದ ಯುವತಿಯರು.
ಮೇಕಪ್ ಹಾಕದಿದ್ದರೆ ಹೊರಗೆ ಬರೋದಕ್ಕೂ ಹಿಂದೆ ಮುಂದು ನೋಡುತ್ತಾರೆ. ಆ ಮೇಕಪ್ ಹಾಕಲು 30 ರಿಂದ 40 ನಿಮಿಷ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲಿ ನವ ದಂಪತಿಯ ಬದುಕಲ್ಲಿ ಮೇಕಪ್ ವಿಲನ್ ಆಗಿಬಿಟ್ಟಿದೆ. ಅದು ಹೇಗೆ ಅಂತಿರಾ? ಮುಂದೆ ನೋಡಿ. ಹೌದು, ಮೊದಲ ಬಾರಿಗೆ ಹೆಂಡತಿ ಗಂಡನ ಮುಂದೆ ಮೇಕಪ್ ಇಲ್ಲದೇ ಬಂದು ನಿಂತಿದ್ದಕ್ಕೆ, ಆಕೆಯ ನಿಜ ರೂಪವನ್ನು ಗಂಡ ಕಕ್ಕಾಬಿಕ್ಕಿಯಾಗಿದ್ದಾನೆ. ಆಕೆಯ ನಿಜರೂಪವನ್ನು ಕಂಡು ಡೈವೋರ್ಸ್ ನೀಡಿದ್ದಾನೆ ಅಂದರೆ ನಂಬಲು ಕೊಂಚ ಕಷ್ಟ. ಆದರೂ ಇದು ನಡೆದಿರುವುದು ಸತ್ಯ. ಮದುವೆಯಾಗಿದ್ದಾಗಿನಿಂದಲೂ ಹೆಂಡತಿ ಮೇಕಪ್ ಇಲ್ಲದೇ ಗಂಡನಿಗೆ ದರ್ಶನ ನೀಡುತ್ತಿರಲಿಲ್ಲ. ಅದ್ಯಾಕೋ ಒಂದು ದಿನ ಮೇಕಪ್ ಮಾಡಿಕೊಳ್ಳದೇ ಗಂಡನ ಎದುರು ಬಂದು ನಿಂತಿದ್ದಾಳೆ. ತನ್ನ ಪತ್ನಿಯ ನಿಜ ರೂಪ ಕಂಡು ಕೋಪಗೊಂಡು ಪತಿರಾಯನೊಬ್ಬ ಡೈವೋರ್ಸ್ ನೀಡಿದ್ದಾನೆ.

 


Share this Story:

Follow Webdunia kannada

ಮುಂದಿನ ಸುದ್ದಿ

ರಾಡ್‌ನಿಂದ ಪತಿ ಹತ್ಯೆಗೈದ ಪತ್ನಿ!