Publish Date: Wed, 13 Dec 2017 (10:49 IST)
Updated Date: Wed, 13 Dec 2017 (10:59 IST)
ಪಾಕಿಸ್ತಾನ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಆತನ ಬಲಗೈ ಬಂಟ ಛೋಟಾ ಶಕೀಲ್ ನಡುವೆ ಮನಸ್ತಾಪ ಉಂಟಾಗಿದ್ದು, ಪಾಕಿಸ್ತಾನದ ಕರಾಚಿಯಲ್ಲಿ ಇಬ್ಬರು ಬೇರೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಎಂದು ತಿಳಿದುಬಂದಿದೆ.
ಕಳೆದ ಮೂರು ದಶಕಗಳಿಂದ ದಾವುದ್ ಇಬ್ರಾಹಿಂ ಹಾಗೂ ಆತನ ಬಲಗೈ ಬಂಟ ಛೋಟಾ ಶಕೀಲ್ ಅವರು ಎರಡು ದೇಹ, ಒಂದೇ ಪ್ರಾಣ ಎಂಬಂತೆ ಇದ್ದು, ಛೋಟಾ ಶಕೀಲ್ ಡಿ. ಕಂಪೆನಿಯ ವಿಶ್ವಾಸ ಗಳಿಸಿ ದಾವೂದ್ ಇಬ್ರಾಹಿಂನ ಬಲಗೈ ಬಂಟನಾಗಿದ್ದ.ಆತ ಹೇಳಿದ ಎಲ್ಲಾ ಕೆಲಸಗಳನ್ನು ಚಾಚು ತಪ್ಪದೆ ಮಾಡುತ್ತಿದ್ದ.
ಆದರೆ ದಾವುದ್ ಇಬ್ರಾಹಿಂನ ಸಹೋದರ ಅನೀಸ್ ಡಿ ಗ್ಯಾಂಗ್ ನ ಕೆಲಸಗಳಲ್ಲಿ ತಲೆ ತೂರಿಸೋದು ಶಕೀಲ್ ಗೆ ಇಷ್ಟವಿರದ ಕಾರಣ ದಾವುದ್ ಮೇಲೆ ಬೇಸರಗೊಂಡಿದ್ದಾನೆ. ಇದರಿಂದ ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ