Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದಾವೂದ್ ಭಾರತಕ್ಕೆ ಮರಳುವುದು ಮರೆತುಬಿಡಿ: ಮಾಜಿ ಪೊಲೀಸ್ ಆಯುಕ್ತ

ದಾವೂದ್ ಭಾರತಕ್ಕೆ ಮರಳುವುದು ಮರೆತುಬಿಡಿ: ಮಾಜಿ ಪೊಲೀಸ್ ಆಯುಕ್ತ
ಮುಂಬೈ , ಗುರುವಾರ, 26 ಅಕ್ಟೋಬರ್ 2017 (18:51 IST)
ಭೂಗತ ದೊರೆ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ವಶದಲ್ಲಿರುವುದರಿಂದ ಭಾರತಕ್ಕೆ ಮರಳುವ ಸಾಧ್ಯತೆಗಳಿಲ್ಲ ಎಂದು ಮಾಜಿ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
1993ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ  257 ಮಂದಿ ಹತ್ಯೆಯಾಗಿ, 713 ಜನರಿಗೆ ಗಾಯಗಳಾಗಿದ್ದವು. ಒಟ್ಟು 27 ಕೋಟಿ ರೂಪಾಯಿ ಆಸ್ತಿ ನಷ್ಟವಾದ ಪ್ರಕರಣದಲ್ಲಿ ಪ್ರಮುಖ ರೂವಾರಿಯಾಗಿರುವ ಗ್ಯಾಂಗ್‌ಸ್ಟರ್ ದಾವೂದ್ ಸೆರೆಗೆ ಪೊಲೀಸರು ದಶಕಗಳಿಂದ ಯೋಜನೆಗಳನ್ನು ರೂಪಿಸಿದ್ದರು. 
 
ದಾವೂದ್ ಇಬ್ರಾಹಿಂ ಎಸಗಿದ ಅಪರಾಧಗಳನ್ನು ಮರೆಯಬೇಕು ಎಂದು ಹೇಳುತ್ತಿಲ್ಲ. ಆದರೆ, ದಾವೂದ್ ಭಾರತಕ್ಕೆ ಮರಳುವ ಬಗ್ಗೆ ಮರೆಯುವುದು ಸೂಕ್ತ. ಯಾಕೆಂದರೆ ದಾವೂದ್ ಐಎಸ್‌ಐ ವಶದಲ್ಲಿದ್ದಾನೆ. ಒಂದು ವೇಳೆ ದಾವೂದ್ ಭಾರತಕ್ಕೆ ಮರಳಲು ಪ್ರಯತ್ನಿಸಿದಲ್ಲಿ ಐಎಸ್‌ಐ ಅಧಿಕಾರಿಗಳು ದಾವೂದ್‌ನನ್ನು ಹತ್ಯೆ ಮಾಡುತ್ತಾರೆ ಎಂದು ಮಾಜಿ ಪೊಲೀಸ್ ಅಧಿಕಾರಿ ಎಂ.ಎನ್.ಸಿಂಗ್ ತಿಳಿಸಿದ್ದಾರೆ.
 
ದಾವೂದ್ ಇಬ್ರಾಹಿಂ ಎಂದರೆ ಭಯಬೀಳುತ್ತಿದ್ದ ಮುಂಬೈ ನಾಗರಿಕರಿಗೆ. ಇದೀಗ ಅದು ಮರೆಯಾಗಿದೆ. ಇಂತಹ ಗ್ಯಾಂಗ್‌ಗಳಿಗೆ ಸ್ಥಳೀಯ ರಾಜಕಾರಣಿಗಳು ಮತ್ತು ಪೊಲೀಸರು ಕೂಡಾ ಬೆಂಬಲ ನೀಡುತ್ತಿರುವುದು ಕಂಡು ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
 
ನಾನು ಮುಂಬೈ ಸ್ಫೋಟದ ಪ್ರಕರಣದ ತನಿಖೆ ನಡೆಸುತ್ತಿರುವಾಗ ಇಬ್ಬರು ಪೊಲೀಸ್ ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದರು. ಅವರನ್ನು ಕೆಲಸದಿಂದ ವಜಾಗೊಳಿಸಿದ್ದೆ. ಇದೊಂದು ದುರದೃಷ್ಟಕರ ಸಂಗತಿ ಎಂದು ಮಾಜಿ ಪೊಲೀಸ್ ಅಧಿಕಾರಿ ಎಂ.ಎನ್.ಸಿಂಗ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಾಹ್ಮಣ ಪ್ರಾಧಿಕಾರ ರಚನೆಗೆ ಸಿಎಂ ಸಿದ್ದರಾಮಯ್ಯ ಚಿಂತನೆ