ನವದೆಹಲಿ: ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಭಾರತ-ಚೀನಾ ಗಡಿ ನಥೂ ಲಾ ಗೆ ಭೇಟಿ ಕೊಟ್ಟಿದ್ದು, ಚೀನಾ ಯೋಧರೊಂದಿಗೆ ಸ್ನೇಹ ಸಂವಾದ ನಡೆಸಿದ್ದಾರೆ.
ಅಧಿಕಾರಿಗಳು, ಭಾರತದ ಯೋಧರ ಬಿಗಿ ಭದ್ರತೆಯಲ್ಲಿ ಗಡಿಗೆ ಭೇಟಿಕೊಟ್ಟ ಸಚಿವೆ ಚೀನಾ ಯೋಧರತ್ತ ಕೈ ಬೀಸಿದರು. ನಂತರ ಚೀನಾ ಸೈನಿಕರಿಗೆ ನಮಸ್ತೆ ಹೇಳುವುದನ್ನು ಕಲಿಸಿಕೊಟ್ಟರು.
ಚೀನಾ ಯೋಧರೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿದ ಸಚಿವೆ ನಿರ್ಮಲಾ ಪರಸ್ಪರ ಪರಿಚಯ ಮಾಡಿಕೊಂಡರಲ್ಲದೆ, ಸ್ನೇಹ ಸಂವಾದ ನಡೆಸಿದರು. ಭಾರತ ಮತ್ತು ಚೀನಾ ನಡುವೆ ಇತ್ತೀಚೆಗೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಭಾರತದ ರಕ್ಷಣಾ ಸಚಿವೆಯ ಈ ಸ್ನೇಹ ಭೇಟಿ ವಿಶೇಷವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ