ನವದೆಹಲಿ: ವಿವಾದಿತ ಡೋಕ್ಲಾಂ ಗಡಿಯಲ್ಲಿ ಮತ್ತೆ ಚೀನಾ ಸೇನೆ ತನ್ನ ರಹಸ್ಯ ಕಾರ್ಯಾಚರಣೆ ಮುಂದುವರಿಸಿದೆ. ವಿವಾದಿತ ಸ್ಥಳದಿಂದ ಕೆಲವೇ ಕಿ.ಮೀ. ದೂರದಲ್ಲಿ ರಸ್ತೆ ಅಗಲೀಕರಣದ ನೆಪದಲ್ಲಿ ಚೀನಾ ಯೋಧರು ಬೀಡು ಬಿಟ್ಟಿದ್ದು ಆತಂಕ ಸೃಷ್ಟಿಸಿದ್ದಾರೆ.
ರಸ್ತೆ ಅಗಲೀಕರಣ ನೆಪದಲ್ಲಿ ವಿವಾದಿತ ಸ್ಥಳದಿಂದ 12 ಕಿಮೀ ದೂರದಲ್ಲಿ ಚೀನಾ ಯೋಧರು ಭಾರೀ ಸಂಖ್ಯೆಯಲ್ಲಿ ಬೀಡುಬಿಟ್ಟಿದ್ದಾರೆ ಎಂದು ವಾಯುಸೇನಾ ಮುಖ್ಯಸ್ಥ ಧನೋವಾ ಹೇಳಿದ್ದಾರೆ.
‘ಉಭಯ ಸೇನೆಗಳು ಇದುವರೆಗೆ ಎದುರಾಗಿಲ್ಲ. ಆದರೆ ಚುಂಬಿ ವ್ಯಾಲಿಯಲ್ಲಿ ಅವರ ಸೇನೆ ಇನ್ನೂ ಬೀಡು ಬಿಟ್ಟಿದೆ. ರಸ್ತೆ ಕೆಲಸ ಮುಗಿದ ತಕ್ಷಣ ಅವರು ಸೇನೆ ಹಿಂಪಡೆಯಬಹುದು ಎಂದು ಆಶಿಸುತ್ತೇನೆ. ಇದು ಭಾರತದ ಪಾಲಿಗೆ ನಿಜಕ್ಕೂ ಕಳವಳಕಾರಿ ವಿಷಯ’ ಎಂದು ಧನೋವಾ ಹೇಳಿದ್ದಾರೆ.
ಇತ್ತೀಚೆಗಷ್ಟೇ ಡೋಕ್ಲಾಂ ಗಡಿ ವಿಚಾರದಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡು ಯುದ್ಧದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಬ್ರಿಕ್ಸ್ ಸಮ್ಮೇಳನಕ್ಕೆ ಪ್ರಧಾನಿ ಮೋದಿ ಚೀನಾ ದೇಶಕ್ಕೆ ಭೇಟಿ ಕೊಡುವ ಮೊದಲು ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿ ಉಭಯ ದೇಶಗಳೂ ಗಡಿಯಿಂದ ಸೇನೆ ಹಿಂಪಡೆಯಲು ಒಪ್ಪಿಕೊಂಡಿದ್ದವು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ