ಬೀಜಿಂಗ್: ಭಾರತ ಮತ್ತು ಜಪಾನ್ ನಡುವೆ ಗಾಢವಾಗುತ್ತಿರುವ ಸ್ನೇಹ ಸಂಬಂಧ ನೆರೆಯ ಚೀನಾ ದೇಶದ ಹೊಟ್ಟೆ ಉರಿಸಿದೆ. ಭಾರತ-ಜಪಾನ್ ಒಂದಾದರೆ ತನಗೆ ಮಾರಕ ಎಂದು ಅದು ನಂಬಿಕೊಂಡಿದೆ.
ಚೀನಾ ಜತೆ ಡೋಕ್ಲಾಂ ಗಡಿ ವಿವಾದದ ಸಂದರ್ಭದಲ್ಲೂ ಜಪಾನ್ ಭಾರತಕ್ಕೆ ಬೆಂಬಲ ಸೂಚಿಸಿತ್ತು. ಇದೀಗ ಬುಲೆಟ್ ರೈಲು ಯೋಜನೆ ನೆಪದಲ್ಲಿ ಎರಡೂ ರಾಷ್ಟ್ರಗಳು ಮತ್ತಷ್ಟು ಹತ್ತಿರವಾಗುತ್ತಿರುವುದು ಅದರ ನಿದ್ದೆಗೆಡಿಸಿದೆ. ಅಲ್ಲದೆ ಅಮೆರಿಕಾ ಕೂಡಾ ಭಾರತಕ್ಕೆ ಹತ್ತಿರವಾಗುತ್ತಿರುವುದು ಅದಕ್ಕೆ ನುಂಗಲಾರದ ತುತ್ತಾಗಿದೆ.
ಹೀಗಾಗಿ ಜಪಾನ್ ಪ್ರಧಾನಿ ಭಾರತ ಭೇಟಿ ಬಗ್ಗೆ ತನ್ನ ಮಾಧ್ಯಮಗಳಿಗೆ ಲೇಖನ ಹರಿಯಬಿಡುತ್ತಿರುವ ಚೀನಾ, ಭಾರತ ಜಪಾನ್ ಸಂಬಂಧ ಕೇವಲ ಸ್ನೇಹಕ್ಕಷ್ಟೇ ಸೀಮಿತವಾಗಿರಲಿ. ಯುದ್ಧದ ಒಕ್ಕೂಟವಾಗಬಾರದು ಎಂದಿದೆ.