ಡೆಡ್ಲಿ ಕೊರೊನಾ ವೈರಸ್ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಗುಲಿದೆ.
ಕೊರೊನಾ ವೈರಸ್ ನ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಅಮಿತ್ ಶಾ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು.
ಪಾಸಿಟಿವ್ ವರದಿ ಬಂದಿದ್ದನ್ನು ಅಮಿತ್ ಶಾ ಅವರೇ ಬಹಿರಂಗ ಪಡಿಸಿದ್ದಾರೆ.
ಈ ನಡುವೆ ತಮ್ಮ ಸಂಪರ್ಕಕ್ಕೆ ಬಂದವರು, ಐಸೋಲೇಷನ್ ಆಗುವಂತೆ ತಿಳಿಸಿದ್ದಾರೆ.