Publish Date: Fri, 07 Aug 2020 (20:06 IST)
Updated Date: Fri, 07 Aug 2020 (20:14 IST)
ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ಮುಖ್ಯಮಂತ್ರಿ ನಿವಾಸದ ಛಾವಣಿ ಕುಸಿದಿದೆ.
ಛಾವಣಿಯ ರಿಪೇರಿ ನಡೆಯುತ್ತಿರುವಾಗ, ಪಕ್ಕದ ಶೌಚಾಲಯದ ಮೇಲ್ ಛಾವಣಿಯೂ ಕುಸಿದಿದೆ. ಇದರ ನಂತರ ಶೌಚಾಲಯದ ಗೋಡೆಯು ಬಿರುಕು ಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ದೆಹಲಿ ನಗರದಲ್ಲಿ ಭಾರಿ ಮಳೆಯಾದ ನಂತರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆಯ ಚಾವಣಿಯ ಒಂದು ಭಾಗ ಕುಸಿದಿದೆ. ಸಿಎಂ ಅವರ ನಿವಾಸ ಫ್ಲ್ಯಾಗ್ ಸ್ಟಾಫ್ ರಸ್ತೆ, ಸಿವಿಲ್ ಲೈನ್ಸ್‌ನಲ್ಲಿದೆ.
ಅದೃಷ್ಟವಶಾತ್, ಘಟನೆಯ ಸಮಯದಲ್ಲಿ ಯಾರೂ ಕೋಣೆಯಲ್ಲಿ ಇರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.