Publish Date: Tue, 27 Oct 2020 (07:28 IST)
Updated Date: Tue, 27 Oct 2020 (07:30 IST)
ಭೋಪಾಲ್ : ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹ ಬೆಳೆಸಿಕೊಂಡ ಯುವಕನೊಬ್ಬ 15 ವರ್ಷದ ಹುಡುಗಿಯ ಶೀಲ ಕೆಡಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
ಹುಡುಗಿಗೆ ಯುವಕನೊಬ್ಬನ ಜೊತೆ ಸಾಮಾಜಿಕ ಮಾಧ್ಯಮದಲ್ಲಿ ಪರಿಚಯವಾಗಿ ಸ್ನೇಹ ಬೆಳೆದಿದೆ. ಬಳಿಕ ಅವನು ಹುಡುಗಿಯನ್ನು ಭೇಟಿ ಮಾಡಲು ಆಕೆಯ ಮನೆಗೆ ಬಂದಿದ್ದಾನೆ. ಆದರೆ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ಆತ ಆಕೆಯ ಮೇಲೆ ಮಾನಭಂಗ ಎಸಗಿದ್ದಾನೆ. ಹುಡುಗ ಈ ಘಟನೆಯ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ.
ಆದರೆ ಆತ ಮತ್ತೆ ಭೇಟಿಯಾಗಲು ಒತ್ತಡ ಹೇರಿದ್ದಾನೆ. ಆಗ ಹುಡುಗಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಬಗ್ಗೆ ಅತ್ಯಾಚಾರ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿಲು ಬಲೆ ಬೀಸಿದ್ದಾರೆ ಎನ್ನಲಾಗಿದೆ.