Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹುಡುಗಿಯ ಅಶ್ಲೀಲ ಫೋಟೊ ಇಟ್ಟುಕೊಂಡ ಹುಡುಗ ಮಾಡಿದ ನೀಚ ಕೆಲಸವೇನು ಗೊತ್ತೇ?

ಹುಡುಗಿಯ ಅಶ್ಲೀಲ ಫೋಟೊ ಇಟ್ಟುಕೊಂಡ ಹುಡುಗ ಮಾಡಿದ ನೀಚ ಕೆಲಸವೇನು ಗೊತ್ತೇ?
ಭೋಪಾಲ್ , ಶನಿವಾರ, 24 ಅಕ್ಟೋಬರ್ 2020 (10:29 IST)
ಭೋಪಾಲ್ : ಅಪ್ರಾಪ್ತ ಬಾಲಕನೊಬ್ಬ 14 ವರ್ಷದ ಹುಡುಗಿಯ ಅಶ್ಲೀಲ ಫೋಟೊಗಳನ್ನು ಹಂಚಿಕೊಳ್ಳಲು ಒತ್ತಾಯಿಸಿ ಬಳಿಕ ಅದರಿಂದ ಬ್ಲ್ಯಾಕ್ ಮೇಲ್ ಮಾಡಿ ಲೈಂಗಿಕ ಕಿರುಕುಳ ನೀಡಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.

ಹುಡುಗಿ ಹಾಗೂ ಆರೋಪಿ ಒಂದೇ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಪರಸ್ಪರ ಸ್ನೇಹ ಬೆಳೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಚಾಟ್ ಮಾಡುತ್ತಿದ್ದರು. ಬಳಿಕ ಆತ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಅವಳ ಫೋಟೊವನ್ನು ಹಂಚಿಕೊಳ್ಳುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಹುಡುಗಿ ಒಪ್ಪದಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
ಬಳಿಕ ಹುಡುಗಿ ಕಳುಹಿಸಿ ಫೋಟೊವನ್ನು ತನ್ನ ಸ್ನೇಹಿತರಿಗೂ ಕಳುಹಿಸಿ ಲೈಂಗಿಕ ಕಿರುಕುಳ ನೀಡಿರುವುದರ ಜೊತೆಗೆ  ಅದನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾನೆ.

ಬಳಿಕ ಬಾಲಕಿ ಈ ವಿಚಾರ ತನ್ನ ತಾಯಿಗೆ ತಿಳಿಸಿದಾಗ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಟವಾಡಲು ಟೆರೇಸ್ ಕರೆದುಕೊಂಡ ಹೋದವ ಹೀಗಾ ಮಾಡೋದು