Publish Date: Thu, 11 Feb 2021 (09:38 IST)
Updated Date: Thu, 11 Feb 2021 (09:40 IST)
ನವದೆಹಲಿ : ಹದಿಹರೆಯದ ಹುಡುಗನೊಬ್ಬ ಮಹಿಳೆಯರ ಫೋಟೊಗಳನ್ನು ಮಾರ್ಫಿಂಗ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ ಘಟನೆ ದೆಹಲಿಯ ಆರ್.ಕೆ.ಪುರಂನಲ್ಲಿ ನಡೆದಿದೆ.
ಆರೋಪಿ ಮಹಿಳೆಯರ ಫೋಟೊಗಳನ್ನು ಸೋಶಿಯಲ್ ಮೀಡಿಯಾದ ಖಾತೆಗಳಿಂದ ತೆಗೆದುಕೊಂಡು ಅದನ್ನು ಮಾರ್ಪಿಂಗ್ ಮಾಡಿ ಮಹಿಳೆಯರಿಗೆ ಕಳುಹಿಸಿ ಹಣ ನೀಡುವಂತೆ ಒತ್ತಾಯಿಸಿ ಇಲ್ಲವಾದರೆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುದಾಗಿ ಬೆದರಿಕೆ ಹಾಕುತ್ತಿದ್ದ.
ಈ ಬಗ್ಗೆ ಮಹಿಳೆಯೊಬ್ಬಳು ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂದಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.