Publish Date: Wed, 10 Feb 2021 (06:37 IST)
Updated Date: Wed, 10 Feb 2021 (06:38 IST)
ಬೆಂಗಳೂರು : ದ್ರಾಕ್ಷಿ ಹಣ್ಣು ಪ್ರೋಟೀನ್, ಮಿಟಮಿನ್ ಸಿ ಅಂಶವನ್ನು ಹೊಂದಿದೆ. ಇದು ಕೊಬ್ಬನ್ನು ಕರಗಿಸುವ ಅಂಶವನ್ನು ಹೊಂದಿದೆ. ಹಾಗಾಗಿ ಇದನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.
ದ್ರಾಕ್ಷಿ ಹಣ್ಣಿನಲ್ಲಿ ಕ್ಯಾಲೋರಿ ಕಡಿಮೆ ಹಾಗು ಕೊಬ್ಬಿನಾಂಶವಿಲ್ಲ. ಇದರಲ್ಲಿರುವ ವಿಟಮಿನ್ ಸಿ ಅಂಶ ನಿಮ್ಮ ದೇಹದಲ್ಲಿರುವ ಕೊಬ್ಬನ್ನು ಸುಡುತ್ತದೆ. ಇದರಿಂದ ದೇಹದ ತೂಕವನ್ನು ಇಳಿಸಿಕೊಳ್ಳಬಹುದು. ಇದು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ನಿವಾರಿಸುತ್ತದೆ.
ಇದರಲ್ಲಿ ಪೌಷ್ಟಿಕಾಂಶ ಕಡಿಮೆಯಿರುವುದರಿಂದ ಇದನ್ನು ಹೆಚ್ಚು ಸೇವಿಸಿದರೆ ಆಯಾಸವಾಗುತ್ತದೆ. ಇದರಿಂದ ಕೆಲವೊಮ್ಮೆ ಹೊಟ್ಟೆ ನೋವು ಬರಬಹುದು. ತಲೆತಿರುಗುವಿಕೆ ಅಥವಾ ತಲೆ ನೋವು ಸಮಸ್ಯೆ ಕಾಡಬಹುದು. ಹೆಚ್ಚುವರಿ ಪ್ರೋಟೀನ್ ಇರುವುದರಿಂದ ಕಿಡ್ನಿಯಲ್ಲಿ ಕಲ್ಲುಗಳಾಗಬಹುದು.