ಬಹುನಿರೀಕ್ಷಿತ ಬಿಹಾರ ವಿಧಾನಸಭೆ ಚುನಾವಣೆಗಾಗಿ ರಾಜಕೀಯ ಲೆಕ್ಕಾಚಾರದಂತೆ ಬಿಜೆಪಿ ವಿರುದ್ಧ ಮಹಾಘಟಬಂಧನ್ ಸಿದ್ಧಗೊಂಡಿದೆ.
ಕಾಂಗ್ರೆಸ್ ಮತ್ತು ಆರ್ ಜೆಡಿ ಮಹಾಘಟಬಂಧನ್ ನಲ್ಲಿನ ಪ್ರಮುಖ ಪಕ್ಷಗಳಾಗಿದ್ದು, ಸೀಟು ಹಂಚಿಕೆಯನ್ನು ಅಂತಿಮಗೊಳಿಸಿಕೊಂಡಿವೆ.
ಮುಖಂಡ ತೇಜಸ್ವಿ ಯಾದವ್ ಮಹಾಘಟಬಂಧನ್ ದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ.
243 ಕ್ಷೇತ್ರಗಳ ಬಿಹಾರ ಚುನಾವಣೆಯ, ಕಾಂಗ್ರೆಸ್ 70, ಆರ್ಜೆಡಿ 144, ಸಿಪಿಐ 6, ಸಿಪಿಐ(ಎಂಎಲ್) 19 ವಿಧಾನಸಭೆ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿವೆ. ಅಕ್ಟೋಬರ್ 28, ನವೆಂಬರ್ 3 ಹಾಗೂ 7ರಂದು ಚುನಾವಣೆ ನಡೆಯಲಿವೆ.