ಡಿಜೆ ಹಳ್ಳಿ, ಕೆಜಿ ಹಳ್ಳಿ ನಡೆದ ಗಲಭೆಗಳಲ್ಲಿ ಕಾಂಗ್ರೆಸ್, ಎಸ್ ಡಿಪಿಐ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಆರೋಪ ಮಾಡಿದ್ದು, ಶಾಸಕರ ಮನೆ ಮೇಲೆ ನಡೆದ ದಾಳಿಗೂ ಕೈ ಪಾಳೆಯದ ಮುಖಂಡರೇ ಕಾರಣರಾಗಿದ್ದಾರೆ ಎಂದು ದೂರಿದ್ದಾರೆ.
ಈ ಕುರಿತು ಸತ್ಯಶೋಧನಾ ಸಮಿತಿ ತನ್ನವರದಿ ನೀಡಿದೆ.
ಈ ವರದಿಯನ್ನು ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ.