Webdunia - Bharat's app for daily news and videos

Install App

ಮುಂದಿನ 50 ವರ್ಷಗಳವರೆಗೆ ಕೇಂದ್ರದಲ್ಲಿ ಬಿಜೆಪಿಯದ್ದೇ ರಾಜ್ಯಭಾರ: ಅಮಿತ್ ಶಾ

Webdunia
ಶನಿವಾರ, 19 ಆಗಸ್ಟ್ 2017 (18:57 IST)
ಬಿಜೆಪಿ ಪಕ್ಷ ಕೇವಲ 5 ಅಥವಾ 10 ವರ್ಷಗಳ ಕಾಲ ಅಧಿಕಾರದ್ಲಲಿರಲು ಕೇಂದ್ರದಲ್ಲಿ ಸರಕಾರ ರಚಿಸಿಲ್ಲ. ಕನಿಷ್ಠ 50 ವರ್ಷಗಳವರೆಗೆ ಕೇಂದ್ರದಲ್ಲಿ ಬಿಜೆಪಿಯದ್ದೇ ರಾಜ್ಯಭಾರ ನಡೆಯಲಿದೆ. ಬಿಜೆಪಿ ಕಾರ್ಯಕರ್ತರು ಪಕ್ಷವನ್ನು ದೇಶದ ಮೂಲೆ ಮೂಲೆಗೂ ತೆಗೆದುಕೊಂಡು ಹೋಗಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರೆ ನೀಡಿದ್ದಾರೆ.
ಕೇಂದ್ರದಲ್ಲಿ ಬಹುಮತವಿರುವ ಸರ್ಕಾರ, ರಾಜ್ಯಗಳಲ್ಲಿ  1,387 ಶಾಸಕರಿದ್ದರೂ ಬಿಜೆಪಿ ಪಕ್ಷ ಮತ್ತಷ್ಟು ಉತ್ತಂಗಕ್ಕೇರಬೇಕು ಎಂದು ಪಕ್ಷದ ಕಾರ್ಯಕರ್ತರು ಬಯಸುತ್ತಿದ್ದಾರೆಂದು ತಿಳಿಸಿದ್ದಾರೆ.
 
ಇಂದು ನಾವು 330 ಕ್ಕೂ ಅಧಿಕ ಸಂಸತ್ ಸದಸ್ಯರೊಂದಿಗೆ ಕೇಂದ್ರದಲ್ಲಿ ಬಹಮತದ ಸರಕಾರವನ್ನು ಹೊಂದಿದ್ದೇವೆ ಮತ್ತು ವಿವಿಧ ರಾಜ್ಯಗಳಲ್ಲಿ 1,387 ಶಾಸಕರನ್ನು ಹೊಂದಿದ್ದೇವೆ. ದೇಶಾದ್ಯಂತ ಬಿಜೆಪಿ ಧ್ವಜ ಹಾರಬೇಕು ಎಂದು ಹೇಳಿದ್ದಾರೆ. 
 
ಮಧ್ಯಪ್ರದೇಶದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ,  ನಾವು 5-10 ವರ್ಷಗಳ ಕಾಲ ಅಧಿಕಾರ ನಡೆಸಲು ಅಧಿಕಾರಕ್ಕೆ ಬಂದಿಲ್ಲ,  ಕನಿಷ್ಠ 50 ವರ್ಷಗಳು ಅಧಿಕಾರದಲ್ಲಿರಬೇಕು ಎಂದು ಬಯಸಿದ್ದೇವೆ. ನಾವು 40-50 ವರ್ಷಗಳ ಅವಧಿಯಲ್ಲಿ ಅಧಿಕಾರ ಬಲದಿಂದ ದೇಶದಲ್ಲಿ ಪ್ರಮುಖ ಬದಲಾವಣೆಗಳನ್ನು ತರಬೇಕಾಗಿದೆ ಎಂದು ತಿಳಿಸಿದ್ದಾರೆ.
 
ಮಧ್ಯಪ್ರದೇಶ ಬಿಜೆಪಿಯ ಕೋರ್ ಗುಂಪಿನ ಸದಸ್ಯರು, ಕಚೇರಿ ಅಧಿಕಾರಿಗಳು, ಸಂಸದರು, ಎಂಎಲ್ಎಗಳು ಮತ್ತು ಜಿಲ್ಲಾ ಮುಖ್ಯಸ್ಥರನ್ನು ಅವರು ಉಪಸ್ಥಿತರಿದ್ದರು.
 
110 ದಿನಗಳ ರಾಷ್ಟ್ರೀಯ ಪ್ರವಾಸದ ಭಾಗವಾಗಿ ಹಲವು ನಗರಗಳಲ್ಲಿ ವಿವಿಧ ಕಾರ್ಯಸೂಚಿಗಳಲ್ಲಿ ಪಾಲ್ಗೊಂಡು ನಗರಕ್ಕೆ ಮೂರು ದಿನಗಳ ಭೇಟಿಗಾಗಿ ಆಗಮಿಸಿರುವ ಅಮಿತ್ ಶಾ, ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ್ದಾರೆ.  
 
ಬಿಜೆಪಿ ಪಕ್ಷವನ್ನು ಬಲಪಡಿಸಿದ್ದರ ಹಿಂದೆ ಸಾವಿರಾರು ಹಿರಿಯ ನಾಯಕರ ಪರಿಶ್ರಮ, ತ್ಯಾಗ, ಬಲಿದಾನ ಅಡಗಿದೆ. ಅದರ ಪ್ರತಿಫಲವಾಗಿ ಬಿಜೆಪಿ ಪಕ್ಷ ಇಂದು 10-12 ಕೋಟಿ ಸದಸ್ಯರನ್ನು ಹೊಂದಿದೆ ಎನ್ನುವುದನ್ನು ಮರೆಯಬಾರದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಲಹೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments