Publish Date: Sat, 19 Aug 2017 (15:27 IST)
Updated Date: Sat, 19 Aug 2017 (15:29 IST)
ಭೂಸ್ವಾಧೀನಾಧಿಕಾರಿ ಬಸವರಾಜೇಂದ್ರ ಮೇಲೆ ಎಸಿಬಿ ಅಧಿಕಾರಿಗಳು ಒತ್ತಡ ಹೇರಿರುವ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂಗೆ ಮಾನ ಮರ್ಯಾದೆ ಇದ್ರೆ ರಾಜೀನಾಮೆ ಕೊಡಲಿ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‌ವೈ ವಿರುದ್ಧ ಸುಳ್ಳು ಹೇಳುವುದಕ್ಕೆ ಒತ್ತಡ ಹೇರಿ ಸುಳ್ಳು ಹೇಳದಿದ್ದಲ್ಲಿ ಆರೋಪಿಯಾಗಿಸುತ್ತೇವೆ ಎಂದು ಎಸಿಬಿ ಅಧಿಕಾರಿಗಳು , 2010 ರಿಂದ 2011ರಲ್ಲಿ ಭೂ ಸ್ವಾಧೀನಾಧಿಕಾರಿಯಾಗಿದ್ದ ಬಸವರಾಜೇಂದ್ರಗೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಸರಕಾರದ ವಿರುದ್ಧ ಧೈರ್ಯ ತೋರಿದ ಅಧಿಕಾರಿ ಬಸವರಾಜೇಂದ್ರ, ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಪತ್ರ ಬರೆದಿದ್ದಾರೆ. ವಜುಭಾಯಿ ವಾಲಾ ಪತ್ರದ ಆಧಾರದ ಮೇಲೆ ಸರಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎಸಿಬಿ ಅಧಿಕಾರಿಗಳಾದ ಬಾಲರಾಜ್ ಮತ್ತು ಅಂಥೋಣಿ, ಭೂ ಸ್ವಾಧೀನಾಧಿಕಾರಿ ಬಸವರಾಜೇಂದ್ರರಿಗೆ ಯಡಿಯೂರಪ್ಪ ವಿರುದ್ಧ ಸುಳ್ಳು ಹೇಳುವಂತೆ ಒತ್ತಡ ಹೇರಿದ ಸಿಎಂ ಸಿದ್ದರಾಮಯ್ಯ ಸರಕಾರ ಅತ್ಯಂತ ಕೀಳುಮಟ್ಟಕ್ಕೆ ಇಳಿದಿದೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.