Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ : ಬಿಜೆಪಿ ಅಧಿಕಾರಕ್ಕಾಗಿ ಅಲ್ಲ ಹಿಂದುತ್ವದ ಸಿದ್ಧಾಂತ ಮತ್ತು ಮಹಾರಾಷ್ಟ್ರದ ಅಭಿವೃದ್ಧಿಗೆ ನಮ್ಮ ಜೊತೆಗೆ ಕೈ ಜೋಡಿಸಿದೆ,
ಬಿಜೆಪಿ ನಮಗೆ ಬೆಂಬಲ ನೀಡಿದ ಕಾರಣದಿಂದಲೇ ನಾವು ಸರ್ಕಾರ ರಚಿಸುವಂತಾಯಿತು ಎಂದು ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಪ್ರಮಾಣ ವಚನ ಸ್ವೀಕಾರದ ಬಳಿಕ ನೀಡಿದ ಮೊದಲ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮಹಾವಿಕಾಸ್ ಅಘಾಡಿ ಸರ್ಕಾರದಲ್ಲಿ ಶಿವಸೇನಾ ಶಾಸಕರು ಕೆಲಸ ಮಾಡಲು ಕಷ್ಟಪಡುತ್ತಿದ್ದರು.
ಕಾಂಗ್ರೆಸ್ ಮತ್ತು ಎನ್ಸಿಪಿ ಪ್ರಾಬಲ್ಯ ಸಾಧಿಸಿತ್ತು. ಉದ್ದವ್ ಠಾಕ್ರೆ ಹಿಂದುತ್ವದ ವಿಚಾರಣದಲ್ಲಿ ಮೊದಲಿನಂತಿರಲಿಲ್ಲ.
ಹಿಂದುತ್ವಕ್ಕೆ ಶಿವಸೇನಾ ಸೇರಿ ಪಕ್ಷೇತರ ಶಾಸಕರು ಮನ್ನಣೆ ನೀಡಿದರು. ಬಿಜೆಪಿ ಬರೀ ಅಧಿಕಾರಕ್ಕಾಗಿ ಇದನ್ನೆಲ್ಲ ಮಾಡದೇ ಅಭಿವೃದ್ಧಿ ಮತ್ತು ಹಿಂದುತ್ವಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಶಾಸಕರು ಬೆಂಬಲ ನೀಡಿದ್ದಾರೆ. ನನ್ನ ಸಿಎಂ ಮಾಡುವ ಮೂಲಕ ಜನರಿಗೆ ಅಧಿಕಾರ ಮುಖ್ಯವಲ್ಲ ಎಂದು ಸಾಬೀತುಪಡಿಸಿದೆ.