ನವದೆಹಲಿ: ರಾಜ್ಯದ ಬಿಜೆಪಿ ನಿಯೋಗವು ಇಂದು ರಾತ್ರಿ 9 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೀ ಅವರನ್ನು ಭೇಟಿ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾದ ತಮ್ಮ (ಬಿ.ವೈ.ವಿಜಯೇಂದ್ರ) ನೇತೃತ್ವದಲ್ಲಿ ಭೇಟಿ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ವಿಚಾರ ಕುರಿತು ಬಿಜೆಪಿ ನಿಯೋಗವು ವರದಿ ನೀಡಲಿದೆ ಎಂದು ವಿವರಿಸಿದರು.
ಧರ್ಮಸ್ಥಳ ಶ್ರೀ ಕ್ಷೇತ್ರದ ವಿಚಾರ ಮಾತ್ರವಲ್ಲದೇ, ಕೊಪ್ಪಳ ಘಟನೆ ಹಾಗೂ ಹಿಂದೂಗಳ ಮೇಲೆ ನಡೆದ ಘಟನೆಗಳ ಕುರಿತು ಮಾತುಕತೆ ನಡೆಸಲಾಗುವುದು. ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆಗಳ ಬಗ್ಗೆ ಬಿಜೆಪಿಯಿಂದ ವರದಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಹರೀಶ್ ಪೂಂಜ ಸೇರಿದಂತೆ ಮಂಗಳೂರು ಭಾಗದ ಬಿಜೆಪಿ ಶಾಸಕರು ಇರುತ್ತಾರೆ ಎಂದು ಅವರು ಹೇಳಿದರು