Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಛತ್ತೀಸ್ ಘಡ: ಭಾರತ ಹಲವು ಸಂಪ್ರದಾಯಗಳನ್ನು ಹೊಂದಿದ ರಾಷ್ಟ್ರ. ಅದರಲ್ಲೂ ಬುಡಕಟ್ಟು ಜನಾಂಗದವರ ಕೆಲವೊಂದು ಸಂಪ್ರದಾಯಗಳು ನಮ್ಮನ್ನು ಬೆರಗುಗೊಳಿಸುತ್ತವೆ.
ಅಂತಹದ್ದೇ ಸಂಪ್ರದಾಯ ಛತ್ತೀಸ್ ಘಡದ ಬಸ್ತಾರ್ ಜಿಲ್ಲೆಯ ಬುಡಕಟ್ಟು ಜನಾಂಗದವರಲ್ಲಿದೆ. ಇಲ್ಲಿ ಗ್ರಾಮದಲ್ಲಿ ಬಿದಿರಿನ ಮನೆಯೊಂದನ್ನು ಕಟ್ಟಲಾಗಿದೆ. ಇಲ್ಲಿ ಮದುವೆಗೆ ಮುನ್ನ ತಾವು ಇಷ್ಟಪಟ್ಟವರೊಂದಿಗೆ ಲೈಂಗಿಕ ಕ್ರಿಯೆ ನಡೆಸಬಹುದು. ಇದೆಲ್ಲಾ ಕಾಮನ್.
ಪ್ರಾಯಕ್ಕೆ ಬಂದ ಹೆಣ್ಣು ಮಕ್ಕಳು, ಹುಡುಗರು ಈ ಬಿದಿರಿನ ಮನೆಗೆ ಬಂದು ಏನು ಬೇಕಾದರೂ ಮಾಡಲು ಸ್ವತಂತ್ರರಂತೆ! ಇದನ್ನು ಯಾರೂ ಕೀಳಾಗಿ ನೋಡಲ್ಲ. ಇಲ್ಲಿ ಯಾವುದೇ ಸಾಮಾಜಿಕ ಒತ್ತಡವಿಲ್ಲದೇ ತಮ್ಮ ಸಂಗಾತಿಯನ್ನು ತಾವೇ ಹುಡುಕಿಕೊಳ್ಳಲು ಸ್ವತಂತ್ರರಾಗಿರುತ್ತಾರಂತೆ!