ಪಾಟ್ನಾ: ಪ್ರೇಯಸಿಯನ್ನು ಭೇಟಿಯಾಗಲು ಹೋದಾಗ ಯುವಕನೊಬ್ಬನಿಗೆ ಬಲವಂತವಾಗಿ ಮದುವೆ ಮಾಡಿಸಿದ ಘಟನೆ ಬಿಹಾರದಲ್ಲಿ ನಡೆದಿದೆ.
ಆದಿತ್ಯ ಕುಮಾರ್ ಎಂಬ ಯುವಕ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದ. ಈ ವೇಳೆ ಆತನನ್ನು ಗಮನಿಸಿದ ಗ್ರಾಮಸ್ಥರು ಹಿಡಿದು ಥಳಿಸಿದ್ದಲ್ಲದೆ, ಬಲವಂತವಾಗಿ ಮದುವೆ ಮಾಡಿಸಿದ್ದಾರೆ.
ಬಳಿಕ ಹುಡುಗ-ಹುಡುಗಿ ಮನೆಯವರಿಗೆ ತಿಳಿಸಲಾಗಿದ್ದು, ಅವರ ಸಮ್ಮುಖದಲ್ಲೇ ಮದುವೆ ನಡೆದಿದೆ ಎನ್ನಲಾಗಿದೆ. ವಿಶೇಷವೆಂದರೆ ಈ ಬಗ್ಗೆ ಇದುವರೆಗೆ ಪ್ರಕರಣ ದಾಖಲಾಗಿಲ್ಲ.