ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್ ಕೆ ಅಡ್ವಾಣಿ ನಡುವಿನ ಗೆಳೆತನದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಒಬ್ಬರ ಬೆಳವಣಿಗೆಗೆ ಇನ್ನೊಬ್ಬರು ಪ್ರೇರಕವಾಗಿ ಸ್ನೇಹವೆಂದರೇನು ಎಂದು ತೋರಿಸಿಕೊಟ್ಟ ದಿಗ್ಗಜ ರಾಜಕಾರಣಿಗಳು ಇವರಿಬ್ಬರು.
ಆದರೆ ವಾಜಪೇಯಿಗೆ ಅಡ್ವಾಣಿ ಬಿಟ್ಟರೆ ಆಪ್ತರಾಗಿದ್ದ ರಾಜಕಾರಣಿ ಎಂದರೆ ಜಾರ್ಜ್ ಫರ್ನಾಂಡಿಸ್. ಮಂಗಳೂರು ಮೂಲದವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅಟಲ್ ಮಂತ್ರಿ ಮಂಡಲದಲ್ಲಿ ರಕ್ಷಣಾ ಸಚಿವರಾಗಿದ್ದವರು.
ತುರ್ತು ಪರಿಸ್ಥಿತಿಯ ಸಂದರ್ಭದಿಂದಲೂ ಇಬ್ಬರೂ ಜತೆಯಾಗಿ ಇದ್ದವರು. ನಂತರ ಪಾಕಿಸ್ತಾನದೊಂದಿಗೆ ಕಾರ್ಗಿಲ್ ಯುದ್ಧ ನಡೆಯುವಾಗ ಪ್ರಧಾನಿಯಾಗಿದ್ದ ವಾಜಪೇಯಿ, ರಕ್ಷಣಾ ಸಚಿವರಾಗಿದ್ದ ಫರ್ನಾಂಡಿಸ್ ಜತೆಯಾಗಿ ನಡೆಸಿದ ಕಾರ್ಯತಂತ್ರಗಳು ಮೆಚ್ಚುಗೆಗೆ ಪಾತ್ರವಾಗಿತ್ತು. ಇಬ್ಬರೂ ರಾಜಕಾರಣಿಗಳ ಕಾಂಗ್ರೆಸ್ ವಿರೋಧಿ ಮನಸ್ಥಿತಿ ಸಂಬಂಧವನ್ನು ಗಟ್ಟಿಗೊಳಿಸಿತ್ತು. ಕೆಲವೊಮ್ಮೆ ಇಬ್ಬರ ನಡುವೆ ಮುನಿಸು ಮೂಡಿದರೂ ಒಬ್ಬರನ್ನೊಬ್ಬರು ಬಿಟ್ಟುಕೊಡಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.