Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗೌರಿ ಲಂಕೇಶ್ ಹತ್ಯೆ ಬಗ್ಗೆ ಅತೀವ ದುಃಖ ವ್ಯಕ್ತಪಡಿಸಿದ ಎ.ಆರ್. ರೆಹಮಾನ್

ಗೌರಿ ಲಂಕೇಶ್ ಹತ್ಯೆ ಬಗ್ಗೆ ಅತೀವ ದುಃಖ ವ್ಯಕ್ತಪಡಿಸಿದ ಎ.ಆರ್. ರೆಹಮಾನ್
ಮುಂಬೈ , ಶುಕ್ರವಾರ, 8 ಸೆಪ್ಟಂಬರ್ 2017 (20:43 IST)
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ತೀವ್ರವಾಗಿ ಖಂಡಿಸಿದ್ದಾರೆ.  ಅಂತಹ ಘಟನೆಗಳು ದೇಶದಲ್ಲಿ ಮುಂದುವರೆದರೆ , ಅದು ನಮ್ಮ ಭಾರತವಲ್ಲ ಎಂದು ಹೇಳಿದ್ದಾರೆ.
 

ಗೌರಿ ಲಂಕೇಶ್ ಹತ್ಯೆ ಬಗ್ಗೆ ಅತೀವ ದುಃಖ ವ್ಯಕ್ತಪಡಿಸಿರುವ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ರೆಹಮಾನ್, ಗೌರಿ ಹತ್ಯೆ ವಿಷಯದಿಂದ ನನಗೆ ಅತೀವ ದುಃಖವಾಗಿದೆ. ಈ ತರಹದ ಘಟನೆಗಳು ನಮ್ಮ ದೇಶದಲ್ಲಿ ಆಗುವುದಿಲ್ಲ ಎಂದು ನಂಬಿದ್ದೇನೆ. ಇಂತಹ ಘಟನೆಗಳು ಭಾರತದಲ್ಲಿ ಆಗಿವೆಯೆಂದರೆ ಅದು ನಮ್ಮ ಭಾರತವಲ್ಲ. ನನ್ನ ಭಾರತ ಪ್ರಗತಿಪರ ಮತ್ತು ಒಳ್ಳೆಯ ದೇಶವಾಗಿರಬೇಕೆಂದು ಆಶಿಸುವುದಾಗಿ ಹೇಳಿದ್ದಾರೆ.

ಒನ್ ಹಾರ್ಟ್: ದಿ ಎ.ಆರ್. ರೆಹಮಾನ್ ಕನ್ಸರ್ಟ್ ಫಿಲ್ಮ್ ಪ್ರೀಮಿಯರ್ ಶೋ ಕಾರ್ಯಕ್ರಮದಲ್ಲಿ ಮಾತನಾಡಿದ ರೆಹಮಾನ್, ಗೌರಿ ಹತ್ಯೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಒನ್ ಹಾರ್ಟ್ ರೆಹಮಾನ್ ಅವರ ಉತ್ತರ ಅಮೆರಿಕದ 14 ನಗರಗಳ ಸಂಗೀತ ಕಛೇರಿ ಪ್ರವಾಸ ಕುರಿತಾದ ಚಿತ್ರ. ಇದರಲ್ಲಿ ರೆಹಮಾನ್ ಸಂದರ್ಶನ, ಬ್ಯಾಂಡ್ ಸದಸ್ಯರ ರಿಹರ್ಸಲ್ ಸೇರಿದಂತೆ ರೆಹಮಾನ್ ಸಂಗೀತ ಜೀವನದ ಚಿತ್ರಣವನ್ನ ಒಳಗೊಂಡಿದೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕೇಸ್ ದಾಖಲು