Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗೌರಿ ಹತ್ಯೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರದ ವಾಗ್ದಾಳಿ

ಗೌರಿ ಹತ್ಯೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರದ ವಾಗ್ದಾಳಿ
ನವದೆಹಲಿ , ಶುಕ್ರವಾರ, 8 ಸೆಪ್ಟಂಬರ್ 2017 (13:31 IST)
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಕೆಸರೆರಚಾಟ ಆರಂಭವಾಗಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗೌರಿ ಲಂಕೇಶ್ ಹತ್ಯೆ ಬಗ್ಗೆ ಆರೆಸ್ಸೆಸ್, ಸಂಘಪರಿವಾರದ ಬಗ್ಗೆ ಬೊಟ್ಟು ಮಾಡಿದ್ದ ರಾಹುಲ್ ಗಾಂಧಿ ಹೇಳಿಕೆಯನ್ನ ಖಂಡಿಸಿರುವ ರವಿಶಂಕರ್ ಪ್ರಸಾದ್, ಯಾವ ಆಧಾರದ ಮೇಲೆ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ನಕ್ಸಲ್ ವಿಚಾರವನ್ನ ಪ್ರಶ್ನಿಸಿರುವ ಅವರು, ನಕ್ಸಲರನ್ನ ಶರಣಾಗತಿ ಮಾಡಿಸಲು ಗೌರಿ ಲಂಕೇಶ್ ಪ್ರಯತ್ನ ನಡೆಸಿದ್ದರು.  ರಾಜ್ಯ ಸರ್ಕಾರಕ್ಕೆ ತಿಳಿಸಿಯೇ ಗೌರಿ ನಕ್ಸಲ್ ಶರಣಾಗತಿ ನಡೆಸಿದ್ದರೇ..?  ನಕ್ಸಲರಿಗೆ ಗೌರಿ ಲಂಕೇಶ್ ಬಗ್ಗೆ ದ್ವೇಷವಿತ್ತೇ..? ಎಂಬ ಬಗ್ಗೆ ರಾಜ್ಯಸರ್ಕಾರ ಉತ್ತರ ಕೊಡಬೇಕು ಎಂದಿದ್ಧಾರೆ.

ಇದೇವೇಳೆ, ಹತ್ಯೆಯಲ್ಲಿ ಬಲಪಂಥೀಯ ಸಂಘಟನೆ ಕೈವಾಡವಿದೆ ಎಂಬ ರೀತಿ ಹೇಳಿಕೆ ಕೊಡುತ್ತಿರುವುದೇಕೆ..? ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾದಾಗ ಇವರೇಕೆ ಮಾತನಾಡಲಿಲ್ಲ..? ತನಿಖೆ ಮುಗಿಯುವವರೆಗೂ ಯಾವುದೇ ನಿರ್ಧಾರ ಬರಬಾರದು ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೌರಿ ಹತ್ಯೆ ಹೇಳಿಕೆ ವಿವಾದ: ಬಿಜೆಪಿ ಶಾಸಕ ಜೀವರಾಜ್ ವಿರುದ್ಧ ದೂರು ದಾಖಲು