ಅಮೇಠಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ರಾಹುಲ್ ಗಾಂಧಿ ಸಂಸದೀಯ ಕ್ಷೇತ್ರ ಅಮೇಠಿಯಲ್ಲಿ ಬಲ ಪ್ರದರ್ಶನ ಮಾಡಲಿದ್ದಾರೆ. ಅಮಿತ್ ಶಾಗೆ ಸಚಿವೆ ಸ್ಮೃತಿ ಇರಾನಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಸಾಥ್ ನೀಡಲಿದ್ದಾರೆ.
ಅಮೇಠಿಯಲ್ಲಿ ಬೃಹತ್ ಸಮಾವೇಶ ನಡೆಸಲಿರುವ ಅಮಿತ್ ಶಾ ಮತ್ತು ಬಿಜೆಪಿ ನಾಯಕರು ಇದಲ್ಲದೆ, ಹಲವು ಅಭಿವೃದ್ಧಿ ಕಾರ್ಯಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಅಮೇಠಿ ಬಗ್ಗೆ ಬಿಜೆಪಿ ನಾಯಕರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ರಾಹುಲ್ ಟೀಕೆಗೆ ತಿರುಗೇಟು ನೀಡಲು ಅಮಿತ್ ಶಾ ಮತ್ತು ಬಳಗ ಸಜ್ಜಾಗಿದೆ. ಕಳೆದ ವಾರವಷ್ಟೇ ರಾಹುಲ್ ಆರು ತಿಂಗಳ ಬಳಿಕ ತಮ್ಮ ಸ್ವಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಇದೀಗ ಬಿಜೆಪಿ ನಾಯಕರು ರಾಹುಲ್ ಗೆ ಸೆಡ್ಡು ಹೊಡೆಯಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ