Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಮಿತ್ ಶಾ ಪುತ್ರನ ಆದಾಯದಲ್ಲಿ 16 ಸಾವಿರ ಪಟ್ಟು ಹೆಚ್ಚಳ: ಆರೋಪ ಸುಳ್ಳು ಎಂದ ಅನಂತ್ ಕುಮಾರ್

ಅಮಿತ್ ಶಾ ಪುತ್ರನ ಆದಾಯದಲ್ಲಿ 16 ಸಾವಿರ ಪಟ್ಟು ಹೆಚ್ಚಳ: ಆರೋಪ ಸುಳ್ಳು ಎಂದ ಅನಂತ್ ಕುಮಾರ್
ಬೆಂಗಳೂರು , ಸೋಮವಾರ, 9 ಅಕ್ಟೋಬರ್ 2017 (17:50 IST)
ಅಮಿತ್ ಶಾ ಪುತ್ರನ ಬಗ್ಗೆ ವೆಬ್‌ಸೈಟ್ ಸುಳ್ಳುವರದಿ ಮಾಡಿದೆ. ವೆಬ್‌ಸೈಟ್ ವರದಿಯಲ್ಲಿ ಸತ್ಯಾಂಶವಿಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ತಿರುಗೇಟು ನೀಡಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ, ರಾಜ್ಯದಲ್ಲಿ ಡರ್ಟಿ ಟ್ರಿಕ್ಸ್ ಡಿಪಾರ್ಟ್‌ಮೆಂಟ್ ಕಾರ್ಯನಿರ್ವಹಿಸುತ್ತಿದೆ. ಹಿಟ್ ಆಂಡ್ ರನ್ ಕೆಲಸ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. 
 
ಕಾಂಗ್ರೆಸ್‌ನಿಂದ ಅಪಪ್ರಚಾರ ಮಾಡಲಾಗುತ್ತಿದೆ, ಕೆಲವರಿಂದ ಅಮಿತ್ ಶಾ ಪುತ್ರ ಜಯ್ ಶಾ ತೇಜೋವಧೆಗೆ ಪ್ರಯತ್ನ ಮಾಡಲಾಗುತ್ತಿದೆ. ಕೋರ್ಟ್‌ನ ಎಲ್ಲಾ ಪ್ರಶ್ನೆಗಳಿಗೆ ಅಮಿತ್ ಶಾ ಉತ್ತರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
 
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಒಬ್ಬ ಡೈನಾಮಿಕ್ ನಾಯಕ. ಬಿಜೆಪಿ ನಾಯಕರು ಸ್ವಚ್ಚ ರಾಜಕಾರಣ ಮಾಡುತ್ತಿದ್ದಾರೆ. ಮೂರುವರೆ ವರ್ಷಗಳಲ್ಲಿ ಯಾವುದೇ ಸಚಿವರ ಮೇಲೆ ಕಪ್ಪು ಚುಕ್ಕೆಯಿಲ್ಲ. ಇಂತಹ ಸ್ವಚ್ಚ ರಾಜಕಾರಣ ಮಾಡುತ್ತಿರುವುದಕ್ಕೆ ಹೆಮ್ಮೆಯಿದೆ ಎಂದರು.
 
500 ಕೋಟಿ ರೂಪಾಯಿ ಅವ್ಯವಹಾರವಾದ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಜಾಮೀನು ಪಡೆದಿದ್ದಾರೆ. ಅಂತಹ ಭ್ರಷ್ಟ ರಾಜಕಾರಣ ನಾವು ಮಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
 
ವೆಬ್‌ಸೈಟ್‌ನಲ್ಲಿ ಅಮಿತ್ ಶಾ ಪುತ್ರ ಜಯ್ ಶಾ ಕಂಪೆನಿಯ ಆದಾಯ ಒಂದೇ ವರ್ಷದಲ್ಲಿ 50 ಸಾವಿರ ರೂಪಾಯಿಗಳಿಂದ 80 ಕೋಟಿಗೆ ಏರಿಕೆಯಾಗಿದ್ದು 16,000 ಪಟ್ಟು ಹೆಚ್ಚಾಗಿದೆ ಎಂದು ವರದಿ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜಮೀರ್ ಅಹ್ಮದ್ ಖಾನ್ ತಿನ್ನುತ್ತಿರುವುದು ಜೆಡಿಎಸ್‌ನ ಅನ್ನ: ರೇವಣ್ಣ