ಪುಣೆ : ಅಪರಿಚಿತ ಮಹಿಳೆ ಜೊತೆ ಸಂಬಂಧ ಬೆಳೆಸಿದ ವಿವಾಹಿತನೊಬ್ಬ ಆಕೆಯ ಕಿರುಕುಳ ಸಹಿಸದೆ ನ್ಯಾಯಕ್ಕಾಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಅಭಯ್ ಎಂಬಾತನಿಗೆ ವೆಬ್ಸೈಟ್ ಒಂದರ ಮೂಲಕ ಮಹಿಳೆಯೊಬ್ಬಳ ಪರಿಚಯವಾಗಿತ್ತು. ಈ ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ದೈಹಿಕ ಸಂಬಂಧ ಕೂಡ ಬೆಳಸಿದ್ದಾರೆ. ಆದರೆ ಆ ವೇಳೆ ಅಭಯ್, ಮಹಿಳೆಗೆ 2500 ರೂಪಾಯಿ ನೀಡಿದ್ದಾನೆ.
ಇದನ್ನೇ ನೆಪವಾಗಿಟ್ಟುಕೊಂಡ ಮಹಿಳೆ ಹಣಕ್ಕಾಗಿ ಆತನನ್ನು ಪೀಡಿಸಲು ಶುರುಮಾಡಿದ್ದಾಳೆ. ಆಗ ಆತ 1500 ರೂಪಾಯಿ ಕೊಡುವುದಾಗಿ ಹೇಳಿದ್ದಾನೆ. ಇದಕ್ಕೆ ಒಪ್ಪದ ಮಹಿಳೆ 50 ಸಾವಿರಕ್ಕೆ ಬೇಡಿಕೆಯಿಟ್ಟಿದ್ದಾಳೆ. ಒಂದು ವೇಳೆ ಹಣ ಕೊಡದಿದ್ದರೆ ಈ ವಿಚಾರವನ್ನು ಆತನ ಪತ್ನಿಗೆ ಹೇಳುವುದಾಗಿ ಬೆದರಿಕೆಯೊಡ್ಡಿದ್ದಾಳೆ. ಇದರಿಂದ ಬೇಸತ್ತ ಅಭಯ್ ಮಹಿಳೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.