Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಫೇಸ್ ಬುಕ್ ಗೆಳತಿಯ ತಂದೆಯನ್ನು ಚಾಕುವಿನಿಂದ ಇರಿದ ಭೂಪ

ಫೇಸ್ ಬುಕ್ ಗೆಳತಿಯ ತಂದೆಯನ್ನು ಚಾಕುವಿನಿಂದ ಇರಿದ ಭೂಪ
ಪಶ್ಚಿಮ ಬಂಗಾಳ , ಭಾನುವಾರ, 2 ಸೆಪ್ಟಂಬರ್ 2018 (11:14 IST)
ಪಶ್ಚಿಮ ಬಂಗಾಳ : ಪಶ್ಚಮ ಬಂಗಾಳದ ಫರೀದ್ಪುರ ಪ್ರದೇಶದಲ್ಲಿ 28 ವರ್ಷದ ವ್ಯಕ್ತಿಯೊಬ್ಬ ತನ್ನ ಫೇಸ್ ಬುಕ್ ಗೆಳತಿಯ ತಂದೆಯನ್ನು ಚಾಕುವಿನಿಂದ ಇರಿದ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


ಉತ್ತರ ಪ್ರದೇಶದ ಮೂಲದ ಆ ವ್ಯಕ್ತಿ ಫೇಸ್ ಬುಕ್ ನಲ್ಲಿ ಭೇಟಿಯಾದ ಹುಡುಗಿಯೊಬ್ಬಳ ಜೊತೆ ದೀರ್ಘಕಾಲದ  ಸಂಬಂಧವನ್ನು ಹೊಂದಿದ್ದು, ಈ ವಿಚಾರ ಆಕೆಯ ತಂದೆಗೆ ತಿಳಿದ ಕಾರಣ ರಾತ್ರಿಯ ವೇಳೆ ಆಕೆಯ ಮನೆಗೆ ನುಗ್ಗಿ ಆತ ಆಕೆಯ ತಂದೆಯನ್ನು ಚಾಕುವಿನಿಂದ ಇರಿದಿದ್ದಾನೆ.


ಈ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಹುಡುಗಿ ,’ನಾನು ನನ್ನ ತಂದೆ ಕಿರುಚುವ ಧ್ವನಿ ಕೇಳಿ ಕೆಳಗಡೆ ಬಂದಾಗ ಆತ ನನ್ನನ್ನು ಚಾಕುವಿನಿಂದ ಹಲ್ಲೆ ಮಾಡಲು ಪ್ರಯತ್ನಿಸಿದ್ದ. ತಕ್ಷಣ ನಾನು ಬಾಗಿಲನ್ನು ಲಾಕ್ ಮಾಡಿ ಸಹಾಯಕ್ಕಾಗಿ ನೆರೆಹೊರೆಯವರನ್ನು ಕೂಗಿದೆ’ ಎಂದು ಹೇಳಿದ್ದಾಳೆ.


ಹುಡುಗಿಯ ತಾಯಿ ಸಲ್ಲಿಸಿದ ದೂರಿನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಆ ಹುಡುಗಿ ಮಾತ್ರ ಆರೋಪಿಯ ಜೊತೆ ಯಾವುದೇ ಸಂಬಂಧವಿಲ್ಲ ಎಂಬುದಾಗಿ ತಿಳಿಸಿದ್ದಾಳೆ. ತನಿಖೆಯ ನಂತರ ಈ ಬಗ್ಗೆ  ನಿಜಾಂಶ ಹೊರಬೀಳಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಪಾನ್ ಕಾರ್ಡ್ ಗೆ ತಂದೆ ಹೆಸರು ಕಡ್ಡಾಯವಾಗಿ ನಮೂದಿಸಬೇಕಿಲ್ಲ