Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎಲ್ಲಾ ಮಲಯಾಳಿಗಳಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಮಾಡಿಕೊಂಡ ಮನವಿ ಏನು ಗೊತ್ತಾ?

ಎಲ್ಲಾ ಮಲಯಾಳಿಗಳಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಮಾಡಿಕೊಂಡ ಮನವಿ ಏನು ಗೊತ್ತಾ?
ತಿರುವನಂತಪುರಂ , ಸೋಮವಾರ, 27 ಆಗಸ್ಟ್ 2018 (15:15 IST)
ತಿರುವನಂತಪುರಂ: ಕೇರಳ ಪ್ರವಾಹ ಸಂತ್ರಸ್ತ ನಿಧಿಗೆ ಎಲ್ಲಾ ಮಲಯಾಳಿಗಳು ತಮ್ಮ ಒಂದು ತಿಂಗಳ ಸಂಬಳವನ್ನು ದೇಣಿಗೆಯಾಗಿ ನೀಡುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ.


ಪ್ರವಾಹಕ್ಕೆ ಕೇರಳದಲ್ಲಿ 302 ಜನ ಬಲಿಯಾಗಿದ್ದು, 4 ಲಕ್ಷಕ್ಕೂ ಹೆಚ್ಚು ಜನ ಇನ್ನೂ ನೆರೆ ಪರಿಹಾರ ಕೇಂದ್ರಗಳಲ್ಲೇ ಇದ್ದಾರೆ. ಹಾಗಾಗಿ ವಿಶ್ವದಾದ್ಯಂತ ಇರುವ ಮಲಯಾಳಿಗಳು ಈ ಸಂಕಷ್ಟದ ಸಮಯದಲ್ಲಿ ಒಗ್ಗಟ್ಟಾದರೆ ಖಂಡಿತ ನಾವು ಈ ದುರಂತದಿಂದ ಹೊರಬರಬಹುದು ಎಂದು ಪಿಣರಾಯಿ ವಿಜಯನ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.


ಹಾಗೇ ‘‘ತಮ್ಮ ಒಂದು ತಿಂಗಳ ವೇತನವನ್ನು ಒಂದೇ ಸಲಕ್ಕೆ ನೀಡುವುದು ಎಲ್ಲರಿಗೂ ಸಾಧ್ಯವಾಗದಿರಬಹುದು. ಆದ್ದರಿಂದ ಪ್ರತಿ ತಿಂಗಳೂ ಕಂತಿನಂತೆ ಎಲ್ಲರೂ ತಮ್ಮ ಸಂಬಳದ ಕೆಲ ಭಾಗವನ್ನು ನೀಡಿ, ಸಂತ್ರಸ್ಥ ಮಲಯಾಳಿಗಳಿಗೆ ಬೆಂಬಲವಾಗಿ ನಿಲ್ಲಿ" ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಚ್ಚರಿಕೆ ! ಗೂಗಲ್ ಡ್ರೈವ್ ನಲ್ಲಿ ವಾಟ್ಸಾಪ್ ಮಾಹಿತಿ ಸೇಫ್ ಅಲ್ಲ ; ವಾಟ್ಸಾಪ್