ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.
ತ್ವರಿತವಾಗಿ ಸೋಂಕು ಪತ್ತೆಗೆ ಕ್ರಮವಹಿಸಲಾಗಿದ್ದು, ಸೋಂಕಿತರ ಮಾದರಿಗಳಿಂದ ಕೇವಲ 2 ಗಂಟೆಯಲ್ಲಿ ಓಮಿಕ್ರಾನ್ ಪತ್ತೆ ಮಾಡುವ ಕಿಟ್ ಅನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಭಿವೃದ್ಧಿಪಡಿಸಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಿಟ್ಗಳಿಂದ ಓಮಿಕ್ರಾನ್ ಸೋಂಕು ಪತ್ತೆಗೆ ಕನಿಷ್ಠ 3-4 ದಿನಗಳು ಬೇಕಾಗುತ್ತದೆ. ಸೋಂಕು ಪತ್ತೆಯನ್ನು ಮತ್ತಷ್ಟು ತ್ವರಿತಗೊಳಿಸುವ ಉದ್ದೇಶದಿಂದ ಅತ್ಯಾಧುನಿಕ ಕಿಟ್ ಅಭಿವೃದ್ಧಿಪಡಿಸಲಾಗಿದೆ. ಈ ಕಿಟ್ ಅನ್ನು ವಿಜ್ಞಾನಿ ಬಿಸ್ವಜ್ಯೋತಿ ಬೊರ್ಕಕೋಟಿ ನೇತೃತ್ವದ ಐಸಿಎಂಆರ್-ಆರ್ಎಂಆರ್ಸಿ ತಂಡ ಅಭಿವೃದ್ಧಿಪಡಿಸಿದೆ.