ಅಹಮದಾಬಾದ್(ಜು. 23): ನಿರುದ್ಯೋಗಿ ಗಂಡನನ್ನು ಕೊಂದ ಆರೋಪದಡಿ ಮಹಿಳೆ ಮತ್ತು ಆಕೆಯ ಇಬ್ಬರು ಗೆಳೆಯರನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.
•ಕೆಲಸವೇ ಮಾಡದೆ ಮನೆಯಲ್ಲಿ ಬಿದ್ದಿದ್ದ ಸೋಂಬೇರಿ ಗಂಡ
•ಇಬ್ಬರು ಬಾಯ್ಫ್ರೆಂಡ್ಸ್ ಜೊತೆ ಆತನ ಪತ್ನಿ ಮಾಡಿದ್ಲು ಮಾಸ್ಟರ್ ಪ್ಲಾನ್
ಅಹಮದಾಬಾದ್ ಪೊಲೀಸರ ಅಪರಾಧ ವಿಭಾಗದ ಅಧಿಕಾರಿಗಳು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಓರ್ವ ಆರೋಪಿ ಪರಾರಿಯಾಗಿದ್ದಾನೆ. ಪೊಲೀಸರ ಪ್ರಕಾರ 35 ವರ್ಷದ ರೇಖಾ ಸೋಲಂಕಿ ಎಂದು ಗುರುತಿಸಲ್ಪಟ್ಟ ಆರೋಪಿ ಮಹಿಳೆ ಜುಲೈ 17 ರಂದು ಪತಿ ಜಿಗ್ನೇಶ್ನನ್ನು ಕೊಂದಿದ್ದಾಳೆ. ವಿಕ್ಟೋರಿಯಾ ಗಾರ್ಡನ್ ಬಳಿ ಆತನ ಶವ ಪತ್ತೆಯಾಗಿದೆ.
ರೇಖಾ ತನ್ನ ಪತಿಯೊಂದಿಗೆ ಕಾರಂಜ್ನ ಭದ್ರಾಕಾಳಿ ದೇವಸ್ಥಾನದ ಬಳಿ ಫುಟ್ಪಾತ್ನಲ್ಲಿ ವಾಸಿಸುತ್ತಿದ್ದಾರೆ. ಆಕೆ 19 ವರ್ಷದ ಸಬೀರ್ ಪಠಾಣ್ ಮತ್ತು 23 ವರ್ಷದ ರಾಜು ದಾಮೋರ್ ಜೊತೆ ಸಂಬಂಧ ಹೊಂದಿದ್ದಳು ಎಂದು ವರದಿಯಾಗಿದೆ.
ಅವ ಚಿಂದಿ ಆರಿಸಿ ಹಣ ಸಂಪಾದಿಸುತ್ತಿದ್ದಳು. ಅವಳಿಗೆ ಸಹಾಯ ಮಾಡುವ ಬದಲು ಜಿಗ್ನೇಶ್ ಕೆಲಸ ಮಾಡದೆ ಅವಳ ಎಲ್ಲಾ ಹಣವನ್ನು ಖರ್ಚು ಮಾಡುತ್ತಿದ್ದ. ಇದರಿಂದ ಬೇಸರಗೊಂಡ ರೇಖಾ ಕಳೆದ ವಾರ ಪಠಾಣ್ ಮತ್ತು ದಾಮರ್ಗೆ ತನ್ನ ಗಂಡನನ್ನು ಕೊಲ್ಲುವಂತೆ ಹೇಳಿದ್ದಳು.
ಜಿಗ್ನೇಶ್ನನ್ನು ಕೊಲ್ಲುವ ಸಲುವಾಗಿ ಈ ಮೂವರು 23 ವರ್ಷದ ಶಿವಂ ಥಕ್ಕರ್ ಎಂದು ಗುರುತಿಸಲ್ಪಟ್ಟ ಇನ್ನೊಬ್ಬ ವ್ಯಕ್ತಿಯನ್ನು ಸಂಪರ್ಕಿಸಿದ್ದಾರೆ. ಜುಲೈ 17 ರಂದು ಅವರು ಎಲ್ಲಿಸ್ ಸೇತುವೆ ಬಳಿ ನದಿಯ ಮುಂಭಾಗದ ಪೂರ್ವ ಭಾಗದಲ್ಲಿ ಠಕ್ಕರ್ ಅವರನ್ನು ಭೇಟಿಯಾದರು. ಅಪರಾಧ ಮಾಡುವ ಮೊದಲು, ನಾಲ್ವರೂ ಒಟ್ಟಿಗೆ ಊಟ ಮಾಡಿ ಕುಡಿದಿದ್ದಾರೆ. ನಂತರ ಅವರು ಜಿಗ್ನೇಶ್ ಬಳಿ ಬಂದು ಎಲ್ಲಿಸ್ ಸೇತುವೆಗೆ ಕರೆದೊಯ್ದರು.
ರೇಖಾ, ಆಕೆಯ ಇಬ್ಬರು ಗೆಳೆಯರಾದ ಪಠಾಣ್ ಮತ್ತು ದಾಮೋರ್ ಮತ್ತು ಅವರ ಸಹಾಯಕ ಥಕ್ಕರ್ ಮೊದಲು ಜಿಗ್ನೇಶ್ ಮೇಲೆ ಹಲ್ಲೆ ನಡೆಸಿ ನಂತರ ಹಗ್ಗದಿಂದ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ವಿಕ್ಟೋರಿಯಾ ಗಾರ್ಡನ್ ಬಳಿ ಆತನ ದೇಹವನ್ನು ತ್ಯಜಿಸಿ ಪರಾರಿಯಾಗಿದ್ದಾರೆ. ಜಿಗ್ನೇಶ್ ಅವರ ಶವ ಪತ್ತೆಯಾದ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಂತರ, ತನಿಖೆಯನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಯಿತು, ಅದು ಮೂವರು ಆರೋಪಿಗಳನ್ನು ಬಂಧಿಸಿತು. ಪೊಲೀಸರು ಥಕ್ಕರ್ ಹುಡುಕುತ್ತಿದ್ದಾರೆ