Publish Date: Fri, 05 Apr 2019 (18:26 IST)
Updated Date: Fri, 05 Apr 2019 (18:28 IST)
ಚುನಾವಣೆ ಬಂದಾಗ ಮಾತ್ರ ಬಿಜೆಪಿಯವರಿಗೆ ಶ್ರೀರಾಮ ನೆನಪಾಗ್ತಾನೆ. ಬಾಬ್ರಿ ಮಸೀದಿ ಕೆಡವಿ, ರಾಮ ಮಂದಿರ ಕಟ್ಟಿದ್ರಾ? ಹೀಗಂತ ಮಾಜಿ ಸಿಎಂ ಪ್ರಶ್ನೆ ಮಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಬರೀ ಭಾವನಾತ್ಮಕ ವಿಚಾರಗಳನ್ನು ಮಾತನಾಡೋದಲ್ಲ. ಸಾಮಾಜಿಕ ನ್ಯಾಯ, ಸರ್ವಧರ್ಮ ಸಮಾನತೆಗೆ ವಿರೋಧ ಇರುವವರೇ ಬಿಜೆಪಿಯವರು ಎಂದು ಕಿಡಿಕಾರಿದ್ರು.
ರಾಮಮಂದಿರ ಕಟ್ತೀವಿ ಅಂದ್ರಲ್ಲ ಕಟ್ಟಿದ್ರಾ...? ಎಂದು ಪ್ರಶ್ನೆ ಮಾಡಿದ ಅವರು, ಚುನಾವಣೆ ಬಂದಾಗ ಮಾತ್ರ ಇವರಿಗೆ ಶ್ರೀರಾಮ ನೆನಪಾಗೋದು. ಇಟ್ಟಿಗೆ ಇಸಕೊಂಡು ಹೋದ್ರು, ದುಡ್ಡು ಇಸ್ಕೊಂಡು ಹೋದ್ರು, ಆದ್ರೆ ಬಿಜೆಪಿಯವರು ಲೆಕ್ಕಾ ಕೊಟ್ಟರಾ? ಎಂದು ಲೇವಡಿ ಮಾಡಿದ್ರು.