Publish Date: Fri, 05 Apr 2019 (16:27 IST)
Updated Date: Fri, 05 Apr 2019 (16:28 IST)
5 ವರ್ಷ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ನರೇಂದ್ರ ಮೋದಿ ಜನರಲ್ಲಿ ಭ್ರಮೆ ಹುಟ್ಟಿಸುತ್ತಿದ್ದಾರೆ. ಹೀಗಂತ ಕೈ ಪಾಳೆಯದ ಮುಖಂಡ ಆರೋಪಿಸಿದ್ದಾರೆ.
ಮಂಗಳೂರುನಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಆರ್. ವಿ. ಸುದರ್ಶನ್ ಹೇಳಿಕೆ ನೀಡಿದ್ದಾರೆ. ಕೇಂದ್ರದ್ದು ಇದು ಜನ ವಿರೋಧಿ, ರೈತ ವಿರೋಧಿ ಸರಕಾರವಾಗಿದೆ. ದೇಶದ ಚುನಾವಣೆ ವ್ಯವಸ್ಥೆಯಲ್ಲೂ ಯಾವುದೇ ಸುಧಾರಣೆ ಮಾಡಿಲ್ಲ. ದೇಶದ ರಕ್ಷಣಾ ವ್ಯವಸ್ಥೆಗೆ ಅತೀ ಕಡಿಮೆ ಅನುದಾನ ಇಡಲಾಗಿದೆ. ಯು ಪಿ ಎ ಸರಕಾರ ಹೆಚ್ಚಿನ ಅನುದಾನ ನೀಡಿತ್ತು ಎಂದರು.
ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಕೂಡಾ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಅಂತ ದೂರಿದ್ರು.