ವೇತನ ಕೈ ಸೇರದೇ ಇದ್ರೆ 8/07/2023 ಸಾಮೂಹಿಕ ಗೈರಿನ ವಾರ್ನಿಂಗ್ ಆಂಬ್ಯುಲೆನ್ಸ್ ನೌಕರರ ಸಂಘ ಕೊಟ್ಟಿದೆ.ರಾಜ್ಯದಲ್ಲಿ ಸರ್ಕಾರ ಬದಲಾದ್ರೂ ಬದಲಾವಣೆಯಾಗದ 108 ಆಂಬುಲೆನ್ಸ್ ನೌಕರರ ಪರದಾಟ ನಡೆಸುವಂತಾಗಿದೆ.ಜೀವ ರಕ್ಷಕರ ಜೀವನಾನೇ ರಾಜ್ಯದಲ್ಲಿ ರಕ್ಷಣೆ ಇಲ್ವಾ ಅನ್ನೋ ಪ್ರಶ್ನೆ ಶುರುವಾಗಿದೆ.ಒಂದಲ್ಲ ಎರಡಲ್ಲ ನಾಲ್ಕು ನಾಲ್ಕು ತಿಂಗಳ ವೇತನ ಬಾಕಿ ಜಿವಿಕೆ ಕಂಪನಿ ಉಳಿಸಿಕೊಂಡಿದೆ.ಹೊಸ ಟೆಂಡರ್ ಕರೆಯಲು ಕೂಡ ಆರೋಗ್ಯ ಇಲಾಖೆ ಮೀನಾಮೇಷ ಏಣಿಸುತ್ತಿದೆ.4 ತಿಂಗಳಿಂದ ಸ್ಯಾಲರಿ ಕೊಡದೇ ಸಿಬ್ಬಂದಿ ಜಿವಿಕೆ ಕಂಪನಿ ಸತ್ತಾಯಿಸುತ್ತಿದೆ. ಇಷ್ಟಾದರೂ ಟೆಂಡರ್ ಕರೆಯದೇ ಇರೋದ್ಯಾಕೆ ಆರೋಗ್ಯ ಇಲಾಖೆ ಕಾರಣವಾಗಿದೆ.
2017 ರಲ್ಲಿ ರದ್ದು ಮಾಡಿದ್ದ ಟೆಂಡರ್ ರನ್ನ ಇನ್ನೂ ಟೆಂಡರ್ ಕರೆಯದೇ ಕಳ್ಳಾಟ ಮಾಡ್ತಿದೆ.ಸದ್ಯ ಈ ಸಂಬಂಧ ಇಲಾಖೆಯ ಗಮನಕ್ಕೆ ತಂದು ಸಿಬ್ಬಂದಿ ಹೈರಣಾಗಿದ್ದಾರೆ.ಇಂದು ಆರೋಗ್ಯ ಇಲಾಖೆ ಆಯುಕ್ತರ ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದ್ದಾರೆ.ಒಂದು ವೇಳೆ ಮನವಿಗೆ ಬೆಲೆ ಕೊಡದೇ ಇದ್ರೆ ಸಾಮೂಹಿಕ ಗೈರು ಶತಸಿದ್ಧ ಎಂದು ರಾಜ್ಯ ಅಂಬ್ಯುಲೆನ್ಸ್ ನೌಕರರ ಸಂಘ ಮಾಹಿತಿ ನೀಡಿದೆ.