ಬೆಂಗಳೂರಿನ ಯಶವಂತಪುರ ಪೊಲೀಸರಿಂದ ನಕಲಿ ಬಿಎಂಟಿಸಿ ಡಿಸಿ ಅಧಿಕಾರಿಯನ್ನು ಬಂಧಿಸಿಲಾಗಿದೆ. ಸುಬೇದಾರ್ ಪಾಳ್ಯದ ನೂರ್ ಅಹ್ಮದ್ ಬಂಧಿತ ಆರೋಪಿಯಾಗಿದ್ದು ಹಳೆಯ ಡಿಸಿ ವರ್ಗಾವಣೆಯಾಗಿದೆ. ನಾನೇ ಹೊಸ ಡಿಸಿ ಎಂದು ನೂರ್ ಅಹ್ಮದ್ ಹೇಳಿಕೊಂಡು ಆರೋಪಿ ತಿರುಗುತ್ತಿದ್ದನು.ನೂರ್ ಅಹ್ಮದ್ ವೇಷಭೂಷಣ ಕಂಡು ಅಸಲಿ ಡಿಸಿಯೇ ಇರಬಹುದು ಎಂದು ಅಧಿಕಾರಿಗಳೂ ಸಹ ಒಮ್ಮೆಲೆ ಸುಮ್ಮನಾಗಿದ್ದಾರೆ. ಬಳಿಕ ಎರಡನೇ ದಿನ, ಕ್ರಾಸ್ ಚೆಕ್ ವೇಳೆ ಅಸಲಿ ಸಂಗತಿ ಬಯಲಾಗಿದೆ. ಕೂಡಲೇ ಕಂಟ್ರೋಲ್ ರೂಂನ ಅಧಿಕಾರಿಗಳಲ್ಲಿ ವಿಚಾರಿಸಿದಾಗ ನೂರ್ ಅಹ್ಮದ್ ಹೆಸರಿನ ವ್ಯಕ್ತಿ ಇಲ್ಲಾ ಎನ್ನುವುದು ಬೆಳಕಿಗೆ ಬಂದಿದೆ. ಈ ಘಟನೆ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.