Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯುವ ನಿಧಿ ಯೋಜನೆಗೆ ಇಂದು ಚಾಲನೆ: ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ವಿವರ

ಯುವ ನಿಧಿ ಯೋಜನೆಗೆ ಇಂದು ಚಾಲನೆ: ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ವಿವರ
ಬೆಂಗಳೂರು , ಮಂಗಳವಾರ, 26 ಡಿಸೆಂಬರ್ 2023 (10:00 IST)
Photo Courtesy: Twitter
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತನ್ನ ಕೊನೆಯ ಗ್ಯಾರಂಟಿ ಯೋಜನೆ ಯುವ ನಿಧಿಗೆ ಇಂದು ಚಾಲನೆ ನೀಡಲಿದೆ.

ಇಂದು ಬೆಳಿಗ್ಗೆ 11 ಗಂಟೆಗೆ ನಿರುದ್ಯೋಗಿಗಳಿಗೆ ಸಹಾಯ ಧನ ನೀಡುವ ಯುವ ನಿಧಿ ಯೋಜನೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ.

ಇಂದಿನಿಂದಲೇ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ರಾಜ್ಯದ ವಿದ್ಯಾರ್ಥಿಗಳಿಗೆ ಮಾತ್ರ ಯೋಜನೆ ಅನ್ವಯವಾಗಲಿದೆ. ಉದ್ಯೋಗ ಸಿಗುವವರೆಗೆ ಮಾತ್ರ ಯುವ ನಿಧಿ ಸಿಗಲಿದೆ. ಪ್ರತೀ ತಿಂಗಳು 25 ನೇ ತಾರೀಖಿನೊಳಗೆ ಅರ್ಜಿಯಲ್ಲಿ ಈ ಬಗ್ಗೆ ಫಲಾನುಭವಿಗಳು ನಿಖರ ಮಾಹಿತಿ ನೀಡಬೇಕು. ಫಲಾನುಭವಿಗಳು ಕರ್ನಾಟಕ ಒನ್, ಬೆಂಗಳೂರು ಒನ್, ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.

ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು:
  • 2022-23 ನೇ ಸಾಲಿನಲ್ಲಿ ಶೈಕ್ಷಣಿಕ ಪದವಿ ಪಡೆದು 6 ತಿಂಗಳು ಪೂರೈಸಿರಬೇಕು.
  • ಉನ್ನತ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಿರಬಾರದು
  • ಪದವಿ ಅಥವಾ ಡಿಪ್ಲೋಮಾ ಪದವಿ ಪಡೆದಿರಬೇಕು
  • ಪದವೀಧರರಿಗೆ 3,000 ಮತ್ತು ಡಿಪ್ಲೋಮಾ ಪದವೀಧರರಿಗೆ 1,500 ರೂ. ಸಿಗಲಿದೆ.
  • ಉದ್ಯೋಗ ಸಿಗುವವರೆಗೆ ಅಥವಾ 2 ವರ್ಷದವರೆಗೆ ಯುವ ನಿಧಿ ನೇರವಾಗಿ ಖಾತೆಗೇ ಜಮೆಯಾಗಲಿದೆ.
  • ಕರ್ನಾಟಕದ ವಿದ್ಯಾರ್ಥಿಗಳಾಗಿರಬೇಕು
  • ಕರ್ನಾಟಕದ ನಿವಾಸಿ ಎಂಬ ದಾಖಲೆಗಳು ಬೇಕು
  • ಎಸ್ಎಸ್ಎಲ್ಸಿ, ಪಿಯುಸಿ, ಪದವಿ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ವರ್ಗದವರಿಗೆ), ಬ್ಯಾಂಕ್ ಖಾತೆ ವಿವರ, ಆದಾಯ ಪತ್ರ ಒಳಗೊಂಡ ಸ್ವಯಂ ಪ್ರಮಾಣ ಪತ್ರ

Share this Story:

Follow Webdunia kannada

ಮುಂದಿನ ಸುದ್ದಿ

ಡೋಲೋ 650 ಮಾತ್ರೆಯಿಂದ ಬಟ್ಟೆ ಕಲೆ ಮಾಯ!