Publish Date: Wed, 11 Oct 2017 (13:10 IST)
Updated Date: Wed, 11 Oct 2017 (13:12 IST)
ಒಂದೇ ದೇಶ ಒಂದೇ ಮೋದಿ ಎನ್ನುವ ಕಾಲ ಬರುತ್ತದೆ ಎಚ್ಚರವಾಗಿರಿ ಎಂದು ಜೆಡಿಎಸ್ ಮುಖಂಡ ವೈಎಸ್‌ವಿ ದತ್ತಾ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಯಪ್ರಕಾಶ್ ನಾರಾಯಣ್ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದೀಗ ಆಹಾರದ ಮೇಲೆ ತುರ್ತುಪರಿಸ್ಥಿತಿಯಿದೆ. ಮುಂದೆ ರಾಜಕೀಯದಲ್ಲಿ ತುರ್ತುಪರಿಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯಾದಂತೆ ನಾನೇ ಪ್ರಧಾನಿ ನಂದೇ ಪಕ್ಷ ಎನ್ನುವಂತೆ ವರ್ತಿಸಿದ್ದರು. ಪ್ರಧಾನಿ ಮೋದಿ ಕೂಡಾ ಅವರಂತೆ ವರ್ತಿಸುತ್ತಿದ್ದಾರೆ. ಇದು ದುರಂಹಕಾರದ ಪರಮಾವಧಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿಯ ವರ್ತನೆ ಹಿಟ್ಲರ್ ವರ್ತನೆಯಂತಿದೆ. ಬಿಜೆಪಿ ಪಕ್ಷದಲ್ಲಿ ತಾವೇ ಎಲ್ಲಾ ಎನ್ನುವಂತೆ ವರ್ತಿಸುತ್ತಿದ್ದಾರೆ. ಹಿರಿಯ ನಾಯಕರನ್ನು ಮೂಲೆಗುಂಪು ಮಾಡಲಾಗಿದೆ ಎಂದು ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತಾ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.