ರಾಜ್ಯದ 224 ಕ್ಷೇತ್ರಗಳಲ್ಲಿ ಸಂಚರಿಸಲಿರುವ ಪರಿವರ್ತನಾ ಯಾತ್ರೆಯ ಹೊಣೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾಜಿ ಡಿಸಿಎಂ ಆರ್.ಅಶೋಕ್‌ಗೆ ವಹಿಸಿದ್ದಾರೆ.
ಹಿಂದೆ ಪರಿವರ್ತನಾ ಯಾತ್ರೆಯ ಹೊಣೆಯನ್ನು ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆಗೆ ವಹಿಸಿದ್ದರು. ಇದರಿಂದ ಅಶೋಕ್ ತೀವ್ರವಾಗಿ ಅಸಮಾಧಾನಗೊಂಡಿದ್ದರು. ಬೆಂಗಳೂರಿನ ವಿಷಯದಲ್ಲಿ ಕರಂದ್ಲಾಜೆ ಅನಗತ್ಯವಾಗಿ ತಲೆಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.
ಅಶೋಕ್ ಅಸಮಾಧಾನಗೊಂಡ ಹಿನ್ನೆಲೆಯಲ್ಲಿ ಪರಿವರ್ತನಾ ಯಾತ್ರೆಯ ಹೊಣೆಯನ್ನು ಯಡಿಯೂರಪ್ಪ, ಮಾಜಿ ಸಚಿವ ಅಶೋಕ್‌ಗೆ ವಹಿಸಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದ ಪ್ರತಿಯೊಂದು ವಿಧಾನಸಭೆ ಕ್ಷೇತ್ರಗಳಲ್ಲಿ ಸಂಚರಿಸುವ ಪರಿವರ್ತನಾ ಯಾತ್ರೆ, ರಾಜ್ಯ ಸರಕಾರದ ವಿರುದ್ಧ ರಣಕಹಳೆ ಮೊಳಗಿಸಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.