Publish Date: Tue, 26 Jan 2021 (08:46 IST)
Updated Date: Tue, 26 Jan 2021 (08:48 IST)
ಮಂಡ್ಯ: ಹಳೇ ವೈಷಮ್ಯಕ್ಕೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಯುವಕನನ್ನು ಅಪಹರಿಸಿ ದುಷ್ಕರ್ಮಿಗಳು ಹತ್ಯೆ ಮಾಡಿದ ಘಟನೆ ನಡೆದಿದೆ.
23 ವರ್ಷದ ಶರತ್ ಹತ್ಯೆಗೀಡಾದ ಯುವಕ. ಪ್ರೀತಿ ವಿಚಾರವಾಗಿ ವಂಚನೆ ಮಾಡಿದ ಯುವಕನೊಬ್ಬನ ಮನೆ ತೋರಿಸಿ ಎಂದು ಹುಡುಗಿ ಮನೆಯವರು ಕೇಳಿದಾಗ ಶರತ್ ಮನೆ ತೋರಿಸಿಕೊಟ್ಟಿದ್ದಾನೆ. ಇದೇ ಕಾರಣಕ್ಕೆ ಶರತ್ ಮೇಲೆ ಕೋಪಗೊಂಡ ಪ್ರೇಮಿಯ ಕಡೆಯವರೇ ತನ್ನ ಸಹಚರನೊಂದಿಗೆ ಸೇರಿಕೊಂಡು ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.