Publish Date: Thu, 14 Jan 2021 (10:20 IST)
Updated Date: Thu, 14 Jan 2021 (10:22 IST)
ಬೆಂಗಳೂರು: ಯುವಕನೊಬ್ಬನ ಮರ್ಮಾಂಗ ಚಚ್ಚಿ, ತಲೆಗೆ ಹೊಡೆದು ಭೀಕರವಾಗಿ ಹತ್ಯೆ ಮಾಡಿದ ಘಟನೆ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಓಕಳೀಪುರಂನ ರೈಲ್ವೇ ಪ್ಯಾರಲಲ್ ರಸ್ತೆಯಲ್ಲಿ ಯುವಕನ ಶವ ಪತ್ತೆಯಾಗಿದೆ. ಈತನಿಗೆ ಸುಮಾರು 25 ವರ್ಷ ವಯಸ್ಸಿರಬಹುದು ಎಂದು ಅಂದಾಜಿಸಲಾಗಿದೆ. ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯುವಕನ ಗುರುತು ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ.