ಚೆನ್ನೈ: ಆನ್ ಲೈನ್ ಜೂಜಿನಾಟ ಎಷ್ಟೋ ಸಂಸಾರಗಳನ್ನು ಹಾಳು ಮಾಡುತ್ತಿವೆ ಎಂಬ ಆಪಾದನೆಗಳ ಬೆನ್ನಲ್ಲೇ ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬ ಜೂಜಾಟದಲ್ಲಿ 7 ಲಕ್ಷ ರೂ. ಕಳೆದುಕೊಂಡು ಜೀವವನ್ನೇ ಕಳೆದುಕೊಂಡಿದ್ದಾನೆ.
ಖಾಸಗಿಯ ಕಂಪನಿಯ ನೌಕರನಾಗಿದ್ದ ವ್ಯಕ್ತಿ ಮನೆಯಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ತಿರುಪುರ ಬಳಿ ರೈಲ್ವೇ ಹಳಿಯಲ್ಲಿ ಆತನ ಛಿದ್ರಗೊಂಡ ದೇಹ ಸಿಕ್ಕಿದೆ. ಪ್ರಾಥಮಿಕ ತನಿಖೆಗಳಿಂದ ಆತ ಆನ್ ಲೈನ್ ಜೂಜಾಟದಲ್ಲಿ 7 ಲಕ್ಷ ಕಳೆದುಕೊಂಡ ಮಾಹಿತಿ ಸಿಕ್ಕಿದೆ. ಇದೇ ಕಾರಣಕ್ಕೆ ಆತ ಸ್ವಯಂ ಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.