ತಂಬಾಕು ಉತ್ಪನ್ನಗಳ ಮಾರಾಟದ ಕಾನೂನಾತ್ಮಕ ವಯಸ್ಸಿನ ಮಿತಿ 21 ವರ್ಷಗಳಿಗೆ ಏರಿಕೆ, ತಂಬಾಕು ಜಾಹೀರಾತು ಮತ್ತು ಪ್ರಚಾರದ ಮೇಲೆ ಸಮಗ್ರ ನಿಷೇಧ ಮತ್ತು ಸಿಂಗಲ್-ಸ್ಟಿಕ್ ಸಿಗರೇಟ್ (ಸಿಗರೇಟ್/ಬೀಡಿಗಳ ಬಿಡಿ ಮಾರಾಟ) ಮೇಲೆ ನಿರ್ಬಂಧ- ಇವು ಮಕ್ಕಳು ಮತ್ತು ವಿದ್ಯಾರ್ಥಿಗಳು ಸಣ್ಣ ವಯಸ್ಸಿನಲ್ಲಿ ತಂಬಾಕು ಬಳಕೆಯ ಅಭ್ಯಾಸಕ್ಕೆ ಸಿಲುಕುವುದನ್ನು ತಡೆಯಲು ತಜ್ಞರು ಕೆಲ ಶಿಫಾರಸುಗಳನ್ನೂ ಮಾಡಿದ್ದಾರೆ.
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ 2021ರ ಅಕ್ಟೋಬರ್ 21ರಂದು ಆಯೋಜಿಸಿದ್ದ 'ಯುವಜನತೆಯನ್ನು ತಂಬಾಕುವಿನಿಂದ ರಕ್ಷಿಸಲು ಕಾನೂನು ರೂಪುರೇಷೆಗೆ ಬಲ' ಕುರಿತ ಚರ್ಚೆಯಲ್ಲಿ ರಾಷ್ಟ್ರೀಯ
ರಕ್ಷಣಾ ಆಯೋಗ, ಜಾಗತಿಕ ಮತ್ತು ಸ್ಥಳೀಯ ತಜ್ಞರು ಪಾಲ್ಗೊಂಡಿದ್ದರು. ಚರ್ಚೆಯಲ್ಲಿ ಪ್ರತಿಯೊಬ್ಬರೂ, ಯುವಜನತೆಯನ್ನು ತಂಬಾಕು ಸೇವನೆಯಿಂದ ರಕ್ಷಿಸಲು ಮತ್ತು ಆರೋಗ್ಯಪೂರ್ಣ ಮತ್ತು ತಂಬಾಕು ಮುಕ್ತ ಸ್ವಸ್ಥ್ಯ ಭಾರತಕ್ಕೆ ಕಾನೂನು ನೀತಿಗಳನ್ನು ಬಲಗೊಳಿಸುವ ತುರ್ತು ಅಗತ್ಯವನ್ನು ಪುನರುಚ್ಚರಿಸಿದರು.
ಚರ್ಚೆಯಲ್ಲಿ ಪಾಲ್ಗೊಂಡವರು ಸಿಗರೇಟ್ಮತ್ತುಇತರತಂಬಾಕುಉತ್ಪನ್ನಗಳ (ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ಜಾಹೀರಾತು ಮತ್ತು ನಿಯಂತ್ರಣ) ಕಾಯ್ದೆಯ (COTPA 2003) ಲೋಪದೋಷಗಳು ಮತ್ತು ಇದರಿಂದ ತಂಬಾಕು ಸೇವನೆ ಕಡಿತಗೊಳಿಸಲು ಕಾಯ್ದೆಯ ಜಾರಿಗೆ ಇರುವ ಅಡ್ಡಿಗಳ ಕುರಿತು ಚರ್ಚಿಸಿದರು.