ಬೆಂಗಳೂರು : ಕೊವಿಡ್ ನಿಯಮಗಳನ್ನು ಕರ್ನಾಟಕ ಸರ್ಕಾರ ಸಡಿಲಿಸಿರುವುದು ಹಾಗೂ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳ ಪರಿಣಾಮವಾಗಿ ನಗರದಲ್ಲಿ ಅಸ್ತಮಾ (ಅಕ್ಯೂಟ್ ಬ್ರಾಂಕಟಿಸ್) ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.
ಅಸ್ತಮಾ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ ಎಂದು ಹಲವು ಆಸ್ಪತ್ರೆಗಳು ವರದಿ ಮಾಡಿವೆ. ವಾರಕ್ಕೆ ಸರಾಸರಿ ಐದರಿಂದ ಆರು ಹೊಸ ಅಸ್ತಮಾ ಪ್ರಕರಣಗಳು ನಗರದ ಆಸ್ಪತ್ರೆಗಳಲ್ಲಿ ವರದಿಯಾಗುತ್ತಿವೆ. ಈ ಕಾಯಿಲೆ ಕೊವಿಡ್ ಲಕ್ಷಣಗಳನ್ನೇ ಹೊಂದಿದೆ. ಸತತ 20 ದಿನಗಳ ಅವಧಿಗೆ ಕೆಮ್ಮು ನಿಲ್ಲದ ಮಹಿಳೆಯೊಬ್ಬರು ಕೊವಿಡ್ ಸೋಂಕಿನ ಲಕ್ಷಣಗಳಿದ್ದ ಮಹಿಳೆಯೊಬ್ಬರು ಆಸ್ಪತ್ರೆಗೆ ಬಂದಿದ್ದರು. ಆಕೆಯ ಕೊವಿಡ್ ತಪಾಸಣಾ ವರದಿ ನೆಗೆಟಿವ್ ಬಂದಿದ್ದರೂ ಕೆಮ್ಮು ಮಾತ್ರ ನಿಲ್ಲುತ್ತಿರಲಿಲ್ಲ. ಕೊನೆಗೆ ವೈದ್ಯರು ಆಕೆಗೆ ಅಸ್ತಮಾ ಮತ್ತು ಕಫ ಕಡಿಮೆ ಮಾಡುವ ಔಷಧಗಳನ್ನು ಕೊಟ್ಟು ಕೆಮ್ಮು ಕಡಿಮೆ ಮಾಡಿದರು.
ಶ್ವಾಸಕೋಶದ ಕೆಳ ನಾಳಗಳಲ್ಲಿ ಕಂಡು ಬರುವ ಸೋಂಕು ಅಕ್ಯೂಟ್ ಬ್ರಾಂಕಟೈಸ್ (ಅಸ್ತಮಾ) ಆಗಿ ಪರಿವರ್ತನೆಯಾಗಲಿದೆ. ಗಾಳಿ ಸಂಚರಿಸುವ ದೊಡ್ಡ ನಾಳಗಳಿಗೆ ಇದರಿಂದ ಹಾನಿಯಾಗುತ್ತದೆಯಾದರೂ ನ್ಯೂಮೊನಿಯಾದ ಚಹರೆ ಕಾಣಿಸುವುದಿಲ್ಲ. ಸಾಮಾನ್ಯವಾಗಿ ವೈರಸ್ಗಳಿಂದ ಈ ಸೋಂಕು ಕಾಣಿಸಿಕೊಳ್ಳುತ್ತದೆ, ಅಪರೂಪಕ್ಕೊಮ್ಮೆ ಬ್ಯಾಕ್ಟೀರಿಯಾಗಳಿಂದಲೂ ಈ ಸೋಂಕು ಬರುತ್ತದೆ.