Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನಗರದಲ್ಲಿನ ಕಳಪೆ ರಸ್ತೆ ಕಾಮಗಾರಿಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ರಸ್ತೆ ಗುಂಡಿಗಳ ನಿರ್ಮೂಲನೆಗೆ ಆಮ್ ಆದ್ಮಿ ಪಕ್ಷವು (ಎಎಪಿ) ವಾಟ್ಸ್‌ಆಯಪ್ ಸಹಾಯವಾಣಿ ಹಾಗೂ ಕಾರ್ಯಪಡೆ ಆರಂಭಿಸಿದೆ' ಎಂದು ಎಎಪಿ ಮುಖಂಡ ಜಗದೀಶ್ ಕೆ.ಎನ್.ಮಹಾದೇವ್ ತಿಳಿಸಿದರು.ನಗರದಲ್ಲಿ ಕಳಪೆ ರಸ್ತೆ ಕಾಮಗಾರಿ ನಡೆದಿರುವುದು ಹಾಗೂ ಅಪಾಯಕಾರಿ ಗುಂಡಿಗಳು ಕಂಡುಬಂದರೆ, ನಮ್ಮ ಸಹಾಯವಾಣಿಗೆ ( 9513319676) ಸಂದೇಶ ಕಳುಹಿಸಬಹುದು. ನಮ್ಮ ಕಾರ್ಯಪಡೆಯು ಅವುಗಳ ಬಗ್ಗೆ ಪರಾಮರ್ಶಿಸಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಹೋರಾಟ ನಡೆಸಲಿದೆ' ಎಂದು ವಿವರಿಸಿದರು.