Publish Date: Fri, 11 Oct 2019 (18:44 IST)
Updated Date: Fri, 11 Oct 2019 (18:45 IST)
ಯುವಕರ ಗುಂಪೊಂದು ಸಿಂಹದ ದಾಳಿಯಿಂದ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿರೋ ಘಟನೆ ನಡೆದಿದೆ.
ಯುವಕರು ವಾಹನದಲ್ಲಿ ಹೊರಟಿದ್ದಾಗ ವಾಹನದ ಹಿಂದಿನಿಂದ ಸಿಂಹವೊಂದು ಬೆನ್ನು ಹತ್ತಿದೆ. ಇದರಿಂದ ಕೆಲಕಾಲ ಜೀವಭಯದಲ್ಲಿಯೇ ಯುವಕರು ವಾಹನದಲ್ಲಿದ್ದರು.
ಸಫಾರಿಗೆ ಹೋಗಿದ್ದಾಗ ಯುವಕರಿದ್ದ ವಾಹನವನ್ನು ಸಿಂಹವೊಂದು ಬೆನ್ನಟ್ಟಿದೆ. ಗಾಬರಿಗೊಂಡ ಯುವಕರು ವಾಹನವನ್ನು ಸ್ಪೀಡ್ ಆಗಿ ಚಲಾಯಿಸುವಂತೆ ಸಿಬ್ಬಂದಿ ಚಾಲಕನಿಗೆ ಹೇಳಿದ್ದಾರೆ.
ಕಿಲೋ ಮೀಟರ್ ವರೆಗೆ ಬೆನ್ನಟ್ಟಿದ ಸಿಂಹ ಆ ಬಳಿಕ ಕಾಡಿನಲ್ಲಿ ಕಣ್ಮರೆಯಾಯಿತು. ಇದರಿಂದ ವಾಹನದಲ್ಲಿದ್ದವರು ನಿಟ್ಟುಸಿರು ಬಿಟ್ಟಿರು.
ಬಳ್ಳಾರಿ ಜಿಲ್ಲೆಯ ಕಮಲಾಪುರ ಬಳಿಯ ಜಿಯೋಲಾಜಿಕಲ್ ಪಾರ್ಕಿನಲ್ಲಿ ಈ ಘಟನೆ ನಡೆದಿದೆ.