Publish Date: Fri, 04 Oct 2019 (18:20 IST)
Updated Date: Fri, 04 Oct 2019 (18:23 IST)
ಕೇಂದ್ರ ಸರ್ಕಾರ ನೆರೆ ಪರಿಹಾರದ ಹಣ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ನೀಡಿರೋ ಹೇಳಿಕೆಗೆ ಸಂಸದ ಎ.ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಸಂಬದ್ಧ ಹೇಳಿಕೆ ನೀಡಬಾರದು ಅಂತ ಸಲಹೆ ನೀಡಿದ್ದಾರೆ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ.
ಆ ಮೂಲಕ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಪ್ರತಾಪ್ ಸಿಂಹಗೆ ಕಿವಿ ಹಿಂಡಿದ್ದಾರೆ ನಾರಾಯಣಸ್ವಾಮಿ.
ಬರ ಪರಿಹಾರ ವಿಚಾರದಲ್ಲಿ ರಾಜ್ಯ ಸರ್ಕಾರದ ವರದಿ ತಿರಸ್ಕಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರ ರಾಜ್ಯದ ವರದಿ ತಿರಸ್ಕರಿಸಿಲ್ಲ. ಮಾಧ್ಯಮಗಳಲ್ಲಿ ತಪ್ಪ ಮಾಹಿತಿ ನೀಡಬೇಡಿ ಅಂತಂದ್ರು. ಮಹಾರಾಷ್ಟ್ರದಲ್ಲಿ ಪದೇ ಪದೇ ಮಳೆಯಾಗ್ತಿದೆ. ಹಾಗಾಗಿ ಕೇಂದ್ರ ಸರ್ಕಾರ ಸಂಪೂರ್ಣ ವರದಿ ಪಡೆಯುತ್ತಿದೆ. ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿದೆ ಅಂದ್ರು.
ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇರತೆ ಇಲಾಖೆ ಹಣ ಬಳಸಿಕೊಳ್ಳಲು ಫೈನಾನ್ಸ್ ಇಲಾಖೆ ಅನುಮತಿ ಕೋರಲಾಗಿದೆ.
ರಾಜ್ಯಕ್ಕೆ ಪರಿಹಾರ ಕಲ್ಪಿಸೋದು ಕೇಂದ್ರಕ್ಕೆ ದೊಡ್ಡ ವಿಚಾರವಲ್ಲ. ಶಾಶ್ವತ ಪರಿಹಾರ ಕಲ್ಪಿಸೋದಕ್ಕೋಸ್ಕರ ತಡವಾಗ್ತಿದೆ ಎಂದು ಹೇಳಿದ್ದಾರೆ.