Webdunia - Bharat's app for daily news and videos

Install App

ಇನ್ನು ಮುಂದೆ ಬಸ್​ಗಳಲ್ಲಿ ನೀವು ಮೊಬೈಲ್​ ಬಳಸಿ ಜೋರು ಸದ್ದು ಮಾಡುವಂತಿಲ್ಲ!

Webdunia
ಶುಕ್ರವಾರ, 12 ನವೆಂಬರ್ 2021 (21:33 IST)
ಸರ್ಕಾರಿ ಬಸ್​ಗಳಲ್ಲಿ ಪ್ರಯಾಣಿಕರು ಮೊಬೈಲ್​ ಅನ್ನು ಎಗ್ಗಿಲ್ಲದೇ ಬಳಸಿ ಸಹ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಿದ್ದ ಬಗ್ಗೆ ಆಕ್ಷೇಪ ಕೇಳಿ ಬಂದಿತ್ತು. ಇದರಿಂದ ಎಚ್ಚೆತ್ತ ಕೆಎಸ್​ಆರ್​ಟಿಸಿ ನಿಗಮ ಅಧಿಕಾರಿಗಳು ಇನ್ನು ಮುಂದೆ ಬಸ್​ಗಳಲ್ಲಿ ಮೊಬೈಲ್​ ಸದ್ದನ್ನು ಜೋರಾಗಿ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.
ಬಸ್ ಪ್ರಯಾಣದ ವೇಳೆ ಕೆಲವರು ಮೊಬೈಲ್​ಗಳಲ್ಲಿ ಹಾಡು, ಪದ್ಯ, ವಾರ್ತೆ, ಸಿನಿಮಾ ಇತ್ಯಾದಿ ಹಾಕಿ ಸಹ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ಕೋರ್ಟ್ ಮೊರೆ ಹೋಗಲಾಗಿತ್ತು. ಇದನ್ನು ಗಮನಿಸಿದ ಕೆಎಸ್​ಆರ್​ಟಿಸಿ ನಿಗಮದ ಎಂ.ಡಿ. ಶಿವಯೋಗಿ ಕಳಸದ​ ಅವರು, ಇನ್ನು ಮುಂದೆ ಬಸ್​ಗಳಲ್ಲಿ ಮೊಬೈಲ್​​ ಸದ್ದು ಮಾಡುವ ಪ್ರಯಾಣಿಕರಿಗೆ ಸದ್ದು ಮಾಡದಂತೆ ಬಸ್​ ನಿರ್ವಾಹಕ  ಮನವಿ ಮಾಡಬೇಕು. ಅದನ್ನೂ ಲೆಕ್ಕಿಸದೇ ಇದ್ದಾಗ ಅಂತಹ ಪ್ರಯಾಣಿಕರನ್ನು ಪ್ರಯಾಣದ ಮಧ್ಯದಲ್ಲಿಯೇ ಬಸ್ಸಿನಿಂದ ಇಳಿಸಬೇಕು. ಇದಕ್ಕೂ ವಿರೋಧ ವ್ಯಕ್ತಪಡಿಸಿದರೆ ಸ್ಥಳೀಯ ಪೊಲೀಸ್​ ಠಾಣೆಗೆ ಪ್ರಯಾಣಿಕ ಅಂತಹವರ ವಿರುದ್ಧ ದೂರು ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಇದೇ ಮಾದರಿಯ ಸುತ್ತೋಲೆ ಹೊರಡಿಸಿತ್ತು. ಇದೀಗ, ಕೆಎಸ್​ಆರ್​ಟಿಸಿಯೂ ಕೂಡ ಬಸ್​ಗಳಲ್ಲಿ ಮೊಬೈಲ್ ಜೋರು ಸದ್ದು ಮಾಡುವುದನ್ನು ನಿಷೇಧಿಸಿದೆ.
ಕರ್ನಾಟಕ ಮೋಟಾರ್​ ವಾಹನಗಳ ಕಾಯ್ದೆ 1989ರ ನಿಯಮ 94(1)ವಿ ಪ್ರಕಾರ ಇದು ಕಾನೂನು ಬಾಹಿರವಾಗಿದ್ದು, ಬಸ್​ಗಳಲ್ಲಿ ಜೋರಾಗಿ ಶಬ್ದ ಉಂಟು ಮಾಡಿ ಮೊಬೈಲ್ ಬಳಸುವುದಕ್ಕೆ ನಿರ್ಬಂಧವಿದೆ.ಸರ್ಕಾರಿ ಬಸ್​ಗಳಲ್ಲಿ ಪ್ರಯಾಣಿಕರು ಮೊಬೈಲ್​ ಅನ್ನು ಎಗ್ಗಿಲ್ಲದೇ ಬಳಸಿ ಸಹ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಿದ್ದ ಬಗ್ಗೆ ಆಕ್ಷೇಪ ಕೇಳಿ ಬಂದಿತ್ತು. ಇದರಿಂದ ಎಚ್ಚೆತ್ತ ಕೆಎಸ್​ಆರ್​ಟಿಸಿ ನಿಗಮ ಅಧಿಕಾರಿಗಳು ಇನ್ನು ಮುಂದೆ ಬಸ್​ಗಳಲ್ಲಿ ಮೊಬೈಲ್​ ಸದ್ದನ್ನು ಜೋರಾಗಿ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.
ಬಸ್ ಪ್ರಯಾಣದ ವೇಳೆ ಕೆಲವರು ಮೊಬೈಲ್​ಗಳಲ್ಲಿ ಹಾಡು, ಪದ್ಯ, ವಾರ್ತೆ, ಸಿನಿಮಾ ಇತ್ಯಾದಿ ಹಾಕಿ ಸಹ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ಕೋರ್ಟ್ ಮೊರೆ ಹೋಗಲಾಗಿತ್ತು. ಇದನ್ನು ಗಮನಿಸಿದ ಕೆಎಸ್​ಆರ್​ಟಿಸಿ ನಿಗಮದ ಎಂ.ಡಿ. ಶಿವಯೋಗಿ ಕಳಸದ​ ಅವರು, ಇನ್ನು ಮುಂದೆ ಬಸ್​ಗಳಲ್ಲಿ ಮೊಬೈಲ್​​ ಸದ್ದು ಮಾಡುವ ಪ್ರಯಾಣಿಕರಿಗೆ ಸದ್ದು ಮಾಡದಂತೆ ಬಸ್​ ನಿರ್ವಾಹಕ  ಮನವಿ ಮಾಡಬೇಕು. ಅದನ್ನೂ ಲೆಕ್ಕಿಸದೇ ಇದ್ದಾಗ ಅಂತಹ ಪ್ರಯಾಣಿಕರನ್ನು ಪ್ರಯಾಣದ ಮಧ್ಯದಲ್ಲಿಯೇ ಬಸ್ಸಿನಿಂದ ಇಳಿಸಬೇಕು. ಇದಕ್ಕೂ ವಿರೋಧ ವ್ಯಕ್ತಪಡಿಸಿದರೆ ಸ್ಥಳೀಯ ಪೊಲೀಸ್​ ಠಾಣೆಗೆ ಪ್ರಯಾಣಿಕ ಅಂತಹವರ ವಿರುದ್ಧ ದೂರು ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಇದೇ ಮಾದರಿಯ ಸುತ್ತೋಲೆ ಹೊರಡಿಸಿತ್ತು. ಇದೀಗ, ಕೆಎಸ್​ಆರ್​ಟಿಸಿಯೂ ಕೂಡ ಬಸ್​ಗಳಲ್ಲಿ ಮೊಬೈಲ್ ಜೋರು ಸದ್ದು ಮಾಡುವುದನ್ನು ನಿಷೇಧಿಸಿದೆ.
ಕರ್ನಾಟಕ ಮೋಟಾರ್​ ವಾಹನಗಳ ಕಾಯ್ದೆ 1989ರ ನಿಯಮ 94(1)ವಿ ಪ್ರಕಾರ ಇದು ಕಾನೂನು ಬಾಹಿರವಾಗಿದ್ದು, ಬಸ್​ಗಳಲ್ಲಿ ಜೋರಾಗಿ ಶಬ್ದ ಉಂಟು ಮಾಡಿ ಮೊಬೈಲ್ ಬಳಸುವುದಕ್ಕೆ ನಿರ್ಬಂಧವಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಅಡಿಕೆ ಬೆಲೆ ಇಂದೂ ಯಥಾಸ್ಥಿತಿಯಲ್ಲಿ, ಇಂದಿನ ಬೆಲೆ ವಿವರ ಇಲ್ಲಿದೆ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Rahul Gandhi: ರಾಹುಲ್ ಗಾಂಧಿ ಯಾವತ್ತಿದ್ರೂ ಪಾಕಿಸ್ತಾನ ಪರವಾಗಿಯೇ ಇರ್ತಾರೆ: ಬಿಜೆಪಿ ತಿರುಗೇಟು

Bengaluru Rains: ತೆಪ್ಪದಲ್ಲಿ ಕೂತು ಡಿಕೆ ಶಿವಕುಮಾರ್ ಬೆಂಗಳೂರು ರೌಂಡ್ಸ್: ನೆಟ್ಟಿಗರು ಹೇಳಿದ್ದೇನು

India Pakistan: ಜವಹರಲಾಲ್ ನೆಹರೂ ಪಾಕಿಸ್ತಾನಕ್ಕೆ ನೀರು ಮಾತ್ರವಲ್ಲ ಹಣವನ್ನೂ ಕೊಟ್ಟಿದ್ದರು

ಮುಂದಿನ ಸುದ್ದಿ
Show comments