Select Your Language

Notifications

webdunia
webdunia
webdunia
webdunia

ನೀವು ಇಂಥ ಸಂದೇಶ ಹಾಕಿದ್ರೆ ಜೈಲಿಗೆ ಹೋಗ್ತಿರಾ ಹುಷಾರ್

ಜಾಲತಾಣ
ಸಾಮಾಜಿಕ ಜಾಲತಾಣಗಳಲ್ಲಿ ಅನಧಿಕೃತ ಸಂದೇಶಗಳನ್ನು ಹಾಕಿದ್ರೆ ಅಂಥವರ ವಿರುದ್ಧ ಕೇಸ್ ಹಾಕಿ ಜೈಲಿಗೆ ಕಳಿಸೋಕೆ ಜಿಲ್ಲಾಡಳಿತ ಮುಂದಾಗಿದೆ.

ಕೊರೊನಾ ವೈರಸ್  ಸೋಂಕು ಹೊಂದಿದ ವ್ಯಕ್ತಿಗಳ ಹೆಸರು, ವಿಳಾಸದ ವಿವರಗಳ ಮಾಹಿತಿಯನ್ನು ದಿನಾಂಕ 22-04-2020 ರಂದು ಅನಧಿಕೃತವಾಗಿ ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.

ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕುವುದು, ಮಾಧ್ಯಮಗಳಲ್ಲಿ ಪ್ರಕಟಿಸುವುದು,  ಈ ಸಂದೇಶವನ್ನು ಅನಧಿಕೃತವಾಗಿ ಹರಡುವುದು ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 1897 ಹಾಗೂ ಕೋವಿಡ್ ನಿಯಂತ್ರಣ ಕಾಯ್ದೆ 2020 ರಡಿ  ಅಪರಾಧವಾಗಿದೆ.

ಈ ಕುರಿತು ತನಿಖೆ ನಡೆಸಿ  ಸೂಕ್ತ ನಿಗಾ ಇರಿಸಿ , ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು  ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಹುಬ್ಬಳ್ಳಿ -ಧಾರವಾಡ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟ ನಕಲಿ ಪತ್ರಕರ್ತರ ಬಂಧನ