Publish Date: Thu, 16 Apr 2020 (18:27 IST)
Updated Date: Thu, 16 Apr 2020 (18:29 IST)
ಕೋವಿಡ್-19 ವಿರುದ್ಧದ ಕಾರ್ಯದಲ್ಲಿ ನೆರವಾಗಲು ಇನ್ಫೋಸಿಸ್ ಫೌಂಡೇಶನ್ ಮತ್ತೊಮ್ಮೆ ನೆರವಾಗಿದೆ.
ಉಡುಪಿ ಜಿಲ್ಲೆಗೆ ಈಗಾಗಲೇ ಇನ್ಪೋಸಿಸ್ ಫೌಂಡೇಶನ್ ವತಿಯಿಂದ 50 ಲಕ್ಷ ರೂ.ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗಿತ್ತು. ಇದೀಗ ಮುಂದುವರೆದು ಜಿಲ್ಲೆಗೆ 2 ನೇ ಹಂತದಲ್ಲಿ 28,75,320 ರೂ. ಮೌಲ್ಯದ ನಿಟ್ರೈಲ್ ಗ್ಲೌವ್ಸ್, ಎನ್95 ಫೇಸ್ ಮಾಸ್ಕ್, ಫೇಸ್ ಶೀಲ್ಡ್ ಹಾಗೂ ಪಿಪಿಇ ಕಿಟ್ ಗಳನ್ನು ಇನ್ಪೋಸಿಸ್ ಫೌಂಡೇಶನ್ ವತಿಯಿಂದ ಉಡುಪಿ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಜಿಲ್ಲೆಗೆ ಕೋವಿಡ್ ಕಾರ್ಯಾಚರಣೆಯ ಸಂದರ್ಭದಲ್ಲಿ, ವೈದ್ಯಕೀಯ ಸಲಕರಣೆಗಳು ಅಭಾವವಿರುವ ಸಂದರ್ಭದಲ್ಲಿ, ಜಿಲ್ಲಾಡಳಿತದ ಮನವಿಗೆ ತುರ್ತಾಗಿ ಸ್ಪಂದಿಸಿ, ವೈದ್ಯಕೀಯ ಪರಿಕರಗಳನ್ನು ನೀಡಿರುವ ಇನ್ಪೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಸುಧಾಮೂರ್ತಿ ಅವರಿಗೆ ಜಿಲ್ಲಾಡಳಿತದ ಮೂಲಕ ಜಿಲ್ಲಾಧಿಕಾರಿ ಜಿ.ಜಗದೀಶ್ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.