Select Your Language

Notifications

webdunia
webdunia
webdunia
webdunia

ವರದಕ್ಷಿಣೆಗಾಗಿ ಊಟ ನೀಡದೆ 21ಕೆಜಿ ಕುಸಿದು ಮಹಿಳೆ ಸಾವು ಪ್ರಕರಣ: ಪತಿ, ಅತ್ತೆಗೆ ಜೀವಾವಧಿ ಶಿಕ್ಷೆ

ಕೊಲ್ಲಂ ವರದಕ್ಷಿಣೆ ಪ್ರಕರಣ

Sampriya

ಕೊಲ್ಲಂ , ಸೋಮವಾರ, 28 ಏಪ್ರಿಲ್ 2025 (19:20 IST)
Photo Credit X
ಕೊಲ್ಲಂ: ಪೂಯಪಲ್ಲಿಯಲ್ಲಿ 28 ವರ್ಷದ ಮಹಿಳೆ ಮೇಲೆ ನಡೆದ ವರದಕ್ಷಿಣೆ ಪ್ರಕರಣ ಸಂಬಂಧ ಆಕೆಯ ಪತಿ ಹಾಗೂ ತಾಯಿಗೆ ಕೋರ್ಟ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಹಸಿವಿನಿಂದ ಕೊಂದ ಪ್ರಕರಣದಲ್ಲಿ ಚಂದುಲಾಲ್ (36) ಮತ್ತು ಅವರ ತಾಯಿ ಗೀತಾ ಲಾಲಿ (62) ತಪ್ಪಿತಸ್ಥರೆಂದು ಕೊಲ್ಲಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ತೀರ್ಪು ನೀಡಿದೆ. ಅಲ್ಲದೆ ತಲಾ 1 ಲಕ್ಷ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಮೂರನೇ ಆರೋಪಿ ಹಾಗೂ ಚಂದುಲಾಲ್‌ನ ತಂದೆ ಲಾಲಿ (66) ಒಂದು ವರ್ಷದ ಹಿಂದೆ ಇತ್ತಿಕ್ಕಾರ ನದಿಯ ಬಳಿ ಶವವಾಗಿ ಪತ್ತೆಯಾಗಿದ್ದರು.

ತುಷಾರಾ(26) ಅವರಿಗೆ ಊಟ ನೀಡದ ಕಾರಣ ಅವರು ಮೃತಪಟ್ಟಿದ್ದರು. ಇದು ಕೇರಳದಲ್ಲಿ ಭಾರೀ ಆಕ್ರೋಶ ಹೊರಹಾಕಿತ್ತು.

ಹಲವು ದಿನಗಳ ಕಾಲ ಊಟ ಕೊಡದೆ ತುಷಾರಾ ಅವರ ತೂಕ 21ಕೆಜಿಗೆ ಕುಸಿದಿತ್ತು.  ತೀವ್ರವಾಗಿ ನಿತ್ರಾಣರಾಗಿದ್ದ ಅವರು 2019ರಲ್ಲಿ ಕೊನೆಯುಸಿರೆಳೆದರು.

ಈ ಸಾವಿನ ಸಂಬಂಧ ಪತಿ ಮತ್ತು ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಚಂದೂಲಾಲ್ ಮತ್ತು ಗೀತಾ ಅವರನ್ನು ಅರೆಸ್ಟ್ ಮಾಡಿದ್ದರು. ಇದೀಗ ಅವರ ವಿರುದ್ಧದ ದೋಷಾರೋಪ ಸಾಬೀತಾದ ಹಿನ್ನೆಲೆ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Metro Rules Violation: ಮೆಟ್ರೋದಲ್ಲಿ ಆಹಾರ ಸೇವಿಸಲು ಹೋಗಿ ಎಡವಟ್ಟು ಮಾಡಿಕೊಂಡ ಮಹಿಳೆ, ಬಿತ್ತು ದಂಡ